alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಲೆಕ್ಕ ಕೊಟ್ಟಿದ್ದ ಬಿಜೆಪಿ ಶಾಸಕನ ರಾಜೀನಾಮೆ

ಟಿಕೆಟ್ ಸಿಗದ ಕಾರಣ ರಾಜಸ್ತಾನದ ಶಾಸಕ ಜ್ಞಾನದೇವ್ ಅಹುಜಾ ಬಿಜೆಪಿಯಿಂದ ಹೊರನಡೆದಿದ್ದಾರೆ. ಭಾನುವಾರ ಬಿಜೆಪಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದ ಅಹುಜಾ, ಸೋಮವಾರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಘೋಷಣೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಾಜೀನಾಮೆ ವಿಷ್ಯವನ್ನು ಬೆಂಬಲಿಗರಿಗೆ ತಿಳಿಸಿದ ಅಹುಜಾ, ಬಿಜೆಪಿಯ ಸರ್ವಾಧಿಕಾದ ವಿರುದ್ಧ ಪ್ರತಿಭಟಿಸುತ್ತ ನಾನು ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ರಾಮ ಜನ್ಮಭೂಮಿ, ಹಸು ಸಂರಕ್ಷಣೆ ಹಾಗೂ ಹಿಂದುತ್ವ ಮುಂತಾದ ವಿಷ್ಯಗಳನ್ನು ಮುಂದಿಟ್ಟುಕೊಂಡು ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆಂದು ಅಹುಜಾ ಹೇಳಿದ್ದಾರೆ.

ರಾಮಗಢದ ಶಾಸಕರಾಗಿದ್ದ ಅಹುಜಾ, 2016ರಲ್ಲಿ ಜೆಎನ್ಯು ವಿಚಾರದಲ್ಲಿ ಸುದ್ದಿಗೆ ಬಂದಿದ್ದರು. ಜೆಎನ್ಯು ಕ್ಯಾಂಪಸ್ ನಲ್ಲಿ ದಿನಕ್ಕೆ ಸಾವಿರಾರು ಕಾಂಡೋಮ್ ಸಿಗುತ್ತದೆ ಎಂದು ಕಮೆಂಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಲವ್ ಜಿಹಾದ್ ವಿಚಾರದ ಬಗ್ಗೆಯೂ ಹೇಳಿಕೆ ನೀಡಿ ಅಹುಜಾ ಎಲ್ಲರ ಟೀಕೆಗೆ ಗುರಿಯಾಗಿದ್ದರು.

ರಾಜಸ್ತಾನ ವಿಧಾನಸಭೆ ಚುನಾವಣೆಗೆ ತಯಾರಿ ಜೋರಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಮಗಢದಲ್ಲಿ ಟಿಕೆಟ್ ವಂಚಿತ ಅಹುಜಾ ಬೇರೆ ಕಡೆ ಟಿಕೆಟ್ ನೀಡುವಂತೆ ಕೇಳಿದ್ದರು. ಆದ್ರೆ ಬಿಜೆಪಿ ಅಹುಜಾ ಮಾತಿಗೆ ಮನ್ನಣೆ ನೀಡಲಿಲ್ಲ. ಇದ್ರಿಂದ ಕೋಪಗೊಂಡ ಅವ್ರು ರಾಜೀನಾಮೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...