alex Certify
ಕನ್ನಡ ದುನಿಯಾ       Mobile App
       

Kannada Duniya

ಗುರುಗ್ರಾಮದ ಕಿಲ್ಲರ್ ಗಾರ್ಡ್‌ ಗೆ ಇತ್ತು ಇಂಟರ್ನೆಟ್‌ ಚಟ

ಗುರುಗ್ರಾಮದ ನ್ಯಾಯಾಧೀಶರ ಪತ್ನಿ ಹಾಗೂ ಪುತ್ರನ ಕೊಂದು ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಗಾರ್ಡ್‌ ಗೆ ಇಂಟರ್ನೆಟ್ ಚಟವಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮಹಿಪಾಲ್ ಸಿಂಗ್, ಕಳೆದ ಕೆಲ ದಿನಗಳಿಂದ ಮಾನಸಿಕ ಕ್ಷೋಭೆಗೊಳಗಾಗಿದ್ದ. ತನ್ನ ವರ್ತನೆ ಬಗ್ಗೆ ನ್ಯಾಯಾಧೀಶ ಕೃಷ್ಣಕಾಂತ್ ಅವರ ಬಳಿ ಕ್ಷಮೆಯನ್ನೂ ಕೋರಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ರಿತು ಹಾಗೂ ಧ್ರುವ್‌ ಅವರ ಮೇಲೆ ಮಹಿಪಾಲ್ ಏಕಾಏಕಿಯಾಗಿ ಗುಂಡು ಹಾರಿಸಿದ್ದ. ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ 38 ರ ಹರೆಯದ ರಿತು ಶನಿವಾರ ರಾತ್ರಿ ಅಸುನೀಗಿದ್ದರು. ಭಾನುವಾರ ರಾತ್ರಿ 18 ವರ್ಷದ ಧ್ರುವ್‌ನ ಮಿದುಳು ನಿಷ್ಕ್ರಿಯಗೊಂಡಿದೆ ಎಂದೂ ಘೋಷಿಸಲಾಗಿದೆ.

ಆರೋಪಿ ಮಹಿಪಾಲ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ, ಆದಾಗ್ಯೂ ಇನ್ನೂ ಕೊಲೆಯ ಹಿಂದಿನ ನಿಖರ ಉದ್ದೇಶ ತಿಳಿದುಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಿಂಗ್ ತುಂಬಾ ಸಕ್ರಿಯನಾಗಿದ್ದ. ಫೇಸ್‌ಬುಕ್‌ನಲ್ಲಿ ಎರಡೆರಡು ಖಾತೆ ಹೊಂದಿದ್ದ ಎಂಬುದು ಗೊತ್ತಾಗಿದೆ. ತನ್ನ ಪುತ್ರಿಯ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಫೇಸ್‌ಬುಕ್, ವಾಟ್ಸ್ ಆಪ್‌ಗೆ ಅಪ್‌ಲೋಡ್ ಮಾಡುತ್ತಿದ್ದ. ಯೂಟ್ಯೂಬ್‌ನಲ್ಲಿ ಧರ್ಮದ ಕುರಿತ ವಿಡಿಯೋಗಳನ್ನು ನೋಡುತ್ತಿದ್ದ ಎಂದು ತಿಳಿದುಬಂದಿದೆ. ತಾನು ಕೊಲೆ ಮಾಡುವ ವೇಳೆ ತನಗೆ ದೆವ್ವ ಹಿಡಿದಿತ್ತು ಎಂದು ಸಿಂಗ್ ಹೇಳಿಕೊಂಡಿದ್ದಾನೆ. ಆತ ಕೊಲೆಗೈದ ನಂತರವೂ ಕೈಯಲ್ಲಿ ಗನ್ ಹಿಡಿದುಕೊಂಡಿದ್ದ. ಹಾಗಾಗಿ ಸುತ್ತ ನೆರೆದಿದ್ದ ಜನರು ಭಯಭೀತಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...