alex Certify
ಕನ್ನಡ ದುನಿಯಾ       Mobile App
       

Kannada Duniya

ಗುರ್ಮೆಹರ್ ಕೌರ್ ಗೆ ಇಕ್ಕಟ್ಟು ತಂದಿಟ್ಟಿದೆ ವೈರಲ್ ಆಗಿರೋ ವಿಡಿಯೋ

kaur

ತೀವ್ರ ವಿವಾದ ಹುಟ್ಟುಹಾಕಿದ್ದ ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಈಗ ಸಾಮಾಜಿಕ ತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾಳೆ. ಯುವತಿಯೊಬ್ಬಳು ಕುಡಿದು ಕಾರಿನಲ್ಲಿ ಹಾಡುತ್ತ ಕುಣಿಯುವ ವಿಡಿಯೋ ಅಪ್ ಲೋಡ್ ಮಾಡಿರೋದೇ ಇದಕ್ಕೆ ಕಾರಣ.

ಆ ವಿಡಿಯೋದಲ್ಲಿರುವ ಯುವತಿ ಗುರ್ಮೆಹರ್ ಕೌರ್ ಅಂದ್ಕೊಂಡು ಟ್ವಿಟ್ಟರ್ ನಲ್ಲಿ ಎಲ್ರೂ ಕಮೆಂಟ್ ಮೇಲೆ ಕಮೆಂಟ್ ಹಾಕ್ತಿದ್ದಾರೆ. ಅಸಲಿಗೆ ವೈರಲ್ ಆಗಿರೋ ವಿಡಿಯೋದಲ್ಲಿರೋ ಯುವತಿ ಗುರ್ಮೆಹರ್ ಕೌರ್ ಅಲ್ಲ. ಆದ್ರೂ ಅವಳೇ ಅಂದ್ಕೊಂಡಿರೋ ಟ್ವಿಟ್ಟರ್ ಬಳಕೆದಾರರು, ಕೌರ್ ಅಸಲಿಯತ್ತು ಈಗ ಬಯಲಾಗಿದೆ ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ಗುರ್ಮೆಹರ್ ಕೌರ್ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಎಬಿವಿಪಿ ಈ ವಿಡಿಯೋ ಅಪ್ ಲೋಡ್ ಮಾಡಿದೆ ಅಂತಾ ಸಿಪಿಐಎಂ ಮುಖಂಡರು ಆರೋಪಿಸಿದ್ದಾರೆ. ಇದನ್ನು ಅಲ್ಲಗಳೆದಿರುವ ಎಬಿವಿಪಿ, ಕಮ್ಯೂನಿಸ್ಟ್ ಗಳೇ ಇಂತಹ ಕೃತ್ಯ ಮಾಡ್ತಿದ್ದಾರೆಂದು ಕಿಡಿಕಾರಿದೆ. ಇಷ್ಟೆಲ್ಲಾ ವಿವಾದಗಳಿಗೆ ಕಾರಣಳಾಗಿರೋ ಗುರ್ಮೆಹರ್ ಕೌರ್ ಸದ್ಯ ಪಂಜಾಬ್ ನ ಜಲಂಧರ್ ನಲ್ಲಿದ್ದು, ಅವಳ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...