alex Certify
ಕನ್ನಡ ದುನಿಯಾ       Mobile App
       

Kannada Duniya

10 ದಿನಗಳಲ್ಲಿ ಒಂದೇ ATMನಲ್ಲಿ ಎರಡು ಬಾರಿ ಕಳ್ಳತನ

ಗುರ್ಗಾಂವ್ ನ ಬೇಗಂಪುರ ಖಟೋಲ ಎಂಬ ಗ್ರಾಮದಲ್ಲಿ 10 ದಿನಗಳ ಅವಧಿಯಲ್ಲಿ ಒಂದೇ ಎಟಿಎಂನಲ್ಲಿ 2 ಬಾರಿ ಕಳ್ಳತನ ನಡೆದಿದೆ. ದಿ ಟಾಟಾ ಇಂಡಿಕ್ಯಾಶ್ ಮನಿ ವೆಂಡಿಂಗ್ ಮಷಿನ್ ಅನ್ನು ಫೆಬ್ರವರಿ 13ರಂದು ಕಳ್ಳರು ಹೊತ್ತೊಯ್ದಿದ್ದರು.

ಫೆಬ್ರವರಿ 22ರಂದು ಮತ್ತೆ ಅದೇ ಎಟಿಎಂನಿಂದ ಮಷಿನ್ ಅನ್ನು ಕಳವು ಮಾಡಿರೋದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ತನಿಖೆಗೂ ಆದೇಶಿಸಲಾಗಿದೆ. ಭದ್ರತಾ ಲೋಪವೇ ಈ ಅವಳಿ ಕಳ್ಳತನಕ್ಕೆ ಕಾರಣ ಅಂತಾ ಹೇಳಲಾಗ್ತಿದೆ.

ಹಾಗಾಗಿ ಸುತ್ತಮುತ್ತಲ ಪ್ರದೇಶದ ಅಧಿಕಾರಿಗಳನ್ನೆಲ್ಲ ಸೇರಿಸಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಎಷ್ಟೋ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿಯನ್ನೇ ನೇಮಕ ಮಾಡದೇ ಇರುವುದು ಬೆಳಕಿಗೆ ಬಂದಿದೆ. ಹಾಗಾಗಿ ಆಯಾ ಪೊಲೀಸ್ ಠಾಣೆಗಳು ಭದ್ರತೆಯ ಬಗ್ಗೆ ಗಮನ ಹರಿಸಬೇಕೆಂದು ಸೂಚನೆ ನೀಡಲಾಗಿದೆ.

ಎಟಿಎಂಗಳಿರುವ ಏರಿಯಾಗಳಲ್ಲಿ ತಪ್ಪದೇ ಗಸ್ತು ತಿರುಗುವಂತೆ ಸೂಚಿಸಲಾಗಿದೆ. ಎಲ್ಲೆಲ್ಲಿ ಎಷ್ಟೆಷ್ಟು ಎಟಿಎಂಗಳಿವೆ ಎಂಬ ಪಟ್ಟಿಯನ್ನು ಕೂಡ ತಯಾರಿಸಿದ್ದು, ಭದ್ರತೆ ಬಗ್ಗೆ ಇನ್ಮೇಲೆ ಪೊಲೀಸರೇ ಗಮನಹರಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...