alex Certify
ಕನ್ನಡ ದುನಿಯಾ       Mobile App
       

Kannada Duniya

ಅಷ್ಟಕ್ಕೂ ಮೋದಿ ಜೊತೆಗಿರುವ ಈ ಮಹಿಳೆ ಯಾರು?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗಿರುವ ಮಹಿಳೆಯೊಬ್ಬಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮೋದಿ ಇರುವ ಫೋಟೋದಲ್ಲಿಯೂ ಈ ಮಹಿಳೆಯಿದ್ದಾರೆ. ಜೊತೆಗೆ ವಿಮಾನದಲ್ಲಿ ಮೋದಿ ಜೊತೆ ಕುಳಿತಿರುವ ಫೋಟೋ ವೈರಲ್ ಆಗಿದೆ.

ಈ ಮಹಿಳೆ ಯಾರು ಎಂಬ ಪ್ರಶ್ನೆ ಅನೇಕರನ್ನು ಕಾಡ್ತಿದೆ. ವಾಸ್ತವವಾಗಿ ಇವರು ಮೋದಿಗೆ ಅನುವಾದಕರು. ಇವ್ರ ಹೆಸ್ರು ಗುರ್ದೀಪ್ ಕೌರ್ ಚಾವ್ಲಾ. ಮೋದಿ ವಿದೇಶಿ ಪ್ರವಾಸಕ್ಕೆ ತೆರಳಿದಾಗ ಅವರ ಜೊತೆ ಗುರ್ದೀಪ್ ಅನುವಾದಕರಾಗಿ ಹೋಗ್ತಾರೆ.

ಮೋದಿ ಹಿಂದಿಯಲ್ಲಿ ಮಾಡಿದ ಭಾಷಣವನ್ನು ಗುರ್ದೀಪ್ ಇಂಗ್ಲೀಷ್ ಗೆ ಭಾಷಾಂತರಿಸುತ್ತಾರೆ. ಗುರ್ದೀಪ್ ಮೂಲಕ ವಿದೇಶಿ ನಾಯಕರು ಹಾಗೂ ಅಧಿಕಾರಿಗಳು ಮೋದಿ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ. 27 ವರ್ಷಗಳ ಕಾಲ ಇಂಟರ್ಪ್ರಿಟರ್ ಆಗಿ ಕೆಲಸ ಮಾಡಿದ ಗುರ್ದೀಪ್ 1990ರಲ್ಲಿ ಭಾರತೀಯ ಸಂಸತ್ ನಲ್ಲಿ ತಮ್ಮ ವೃತ್ತಿ ಶುರುಮಾಡಿದ್ದರು.1996ರಲ್ಲಿ ಮದುವೆಯಾದ ಗುರ್ದೀಪ್ ಕೆಲಸ ಬಿಟ್ಟಿದ್ದರು.

ಆದ್ರೆ 2010ರಲ್ಲಿ ಜೀವನದಲ್ಲಿ ಮಹತ್ವದ ಬದಲಾವಣೆಯಾಯ್ತು. ಬರಾಕ್ ಒಬಾಮಾರಿಗೆ ಇಂಟರ್ಪ್ರಿಟರ್ ಆಗುವ ಅವಕಾಶ ಸಿಗ್ತು. ಒಬಾಮಾ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಅವರ ಜೊತೆಗಿದ್ದ ಗುರ್ದೀಪ್ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭೇಟಿಯಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...