alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಮುಖ ಖಾತೆಗಳಿಗಾಗಿ ಜೆಡಿಎಸ್ – ಕಾಂಗ್ರೆಸ್ ಬಿಗಿಪಟ್ಟು

ರಾಜ್ಯ ಸಚಿವ ಸಂಪುಟ ರಚನೆಗೆ ನವದೆಹಲಿ ಈಗ ಆಟದ ಮೈದಾನವಾಗಿ ಪರಿಣಮಿಸಿದೆ. ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿ ಪರಿಣಮಿಸಿದೆ. ಪ್ರಮುಖ ಖಾತೆಗಳಿಗಾಗಿ ಜೆಡಿಎಸ್, ಕಾಂಗ್ರೆಸ್ ಬಿಗಿಪಟ್ಟು ಹಿಡಿದಿವೆ.

ಈಗ ಮತ್ತೆ ಕಾಂಗ್ರೆಸ್ ನಾಯಕರು ಜೆಡಿಎಸ್ ಮುಂದೆ ಧರ್ಮಸಿಂಗ್ ಕ್ಯಾಬಿನೆಟ್ ಮಾದರಿಯಂತೆ ಉಪಮುಖ್ಯಮಂತ್ರಿ ಸ್ಥಾನವನ್ನು ಹೊಂದಿದ ಪಕ್ಷಕ್ಕೆ ಪ್ರಮುಖ ಖಾತೆಗಳನ್ನು ನೀಡಬೇಕು ಮತ್ತು ಮುಖ್ಯಮಂತ್ರಿ ಸ್ಥಾನವನ್ನು ಹೊಂದಿರುವ ಪಕ್ಷಕ್ಕೆ ಉಳಿದ ಖಾತೆಗಳನ್ನು ನೀಡಬೇಕು ಎಂಬ ಒತ್ತಾಯ ಕಾಂಗ್ರೆಸ್ ಮುಖಂಡರದ್ದಾಗಿದೆ.

ಈ ಮಾದರಿಯನ್ನು ಅನುಸರಿಸಿದರೆ ಹಣಕಾಸು, ಗೃಹ ಖಾತೆ, ಕಂದಾಯ, ಸೇರಿದಂತೆ ಕೆಲ ಪ್ರಮುಖ ಖಾತೆಗಳು ಕಾಂಗ್ರೆಸ್ ಪಕ್ಷಕ್ಕೆ ಬರಲಿವೆ. ಹೀಗಾಗಿ ಈ ಸೂತ್ರಕ್ಕೆ ಜೆಡಿಎಸ್ ಒಪ್ಪುತ್ತಾ ಅನ್ನೋದು ಪ್ರಶ್ನೆ.

ಜಲಸಂಪನ್ಮೂಲ, ಸಾರಿಗೆ, ಪೌರಾಡಳಿತ, ಲೋಕೋಪಯೋಗಿ, ಎಪಿಎಂಸಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಜೊತೆಗೆ ವಸತಿ ಎಲ್ಲ ಖಾತೆಗಳ ಬಗ್ಗೆ ಚರ್ಚೆ ನಡೆದಿದೆ.

ಗೃಹ ಖಾತೆ, ಅಬಕಾರಿ, ಕೈಗಾರಿಕೆ, ಮೂಲಸೌಕರ್ಯ, ಉನ್ನತ ಶಿಕ್ಷಣ, ಇಂಧನ, ಕೃಷಿ ಖಾತೆಗಳಿಗಾಗಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇವೆ ಹೀಗಾಗಿ ಈ ಖಾತೆಗಳನ್ನು ಕಾಂಗ್ರೆಸ್ ಗೆ ಕೊಡಬೇಕು ಅನ್ನೋ ಚರ್ಚೆಗಳು ಎಐಸಿಸಿ ಪ್ರಮುಖ ಗುಲಾಂ ನಬಿ ಆಜಾದ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...