alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್…! ಹೆಸರನ್ನು ಹೀಗೆ ಬದಲಾಯಿಸಿಕೊಳ್ತಾನಂತೆ ಈ ನಾಸ್ತಿಕ

ಎಷ್ಟೋ ಜನ ತಾವು ಪಕ್ಕಾ ನಾಸ್ತಿಕರೆಂದು ಹೇಳಿಕೊಳ್ತಾರೆ. ಆದ್ರೆ ಕೆಲವೊಮ್ಮೆ ಕುಟುಂಬಸ್ಥರು, ಸಂಬಂಧಿಕರ ಎದುರು ಅದನ್ನು ಪಾಲಿಸುವುದು ಅವರಿಗೇ ಕಷ್ಟವಾಗಿಬಿಡುತ್ತದೆ. ಅಹಮದಾಬಾದ್ ನ ರಾಜ್ ವೀರ್ ಉಪಾಧ್ಯಾಯ ಕೂಡ ನಾಸ್ತಿಕನಂತೆ.

ಆತನಿಗೆ ದೇವರ ಮೇಲೆ ನಂಬಿಕೆಯಿಲ್ಲ. ಧಾರ್ಮಿಕ ನಂಬಿಕೆಯುಳ್ಳವರ ಗಮನ ಸೆಳೆಯಲು ತನ್ನ ಹೆಸರನ್ನೇ ಬದಲಾಯಿಸಿಕೊಳ್ಳಲು ಹೊರಟಿದ್ದಾನೆ. ಇದಕ್ಕಾಗಿ ಸರ್ಕಾರದ ಅನುಮತಿ ಕೇಳುತ್ತಿದ್ದಾನೆ. ಆದ್ರೆ ರಾಜ್ಕೋಟ್ ನ ಗೆಜೆಟ್ ಕಚೇರಿ, ರಾಜ್ ವೀರ್ ಮನವಿಯನ್ನು ತಿರಸ್ಕರಿಸಿದೆ.

ಅಷ್ಟಕ್ಕೂ ರಾಜ್ ವೀರ್ ತನ್ನ ಹೆಸರನ್ನು RV155677820 ಎಂದು ಬದಲಾಯಿಸಿಕೊಳ್ಳಲು ಇಚ್ಛಿಸಿದ್ದ. 2015ರಿಂದ್ಲೂ ಹೆಸರು ಬದಲಾಯಿಸಿಕೊಳ್ಳಲು ರಾಜ್ ವೀರ್ ಪ್ರಯತ್ನ ಮಾಡುತ್ತಲೇ ಇದ್ದಾನೆ. ಅಷ್ಟೇ ಅಲ್ಲ ದಾಖಲೆಗಳಲ್ಲಿ ನಾಸ್ತಿಕತೆಯೇ ತನ್ನ ಧರ್ಮವೆಂದು ನಮೂದಿಸಬೇಕೆಂಬುದು ಅವನ ಉದ್ದೇಶ. ಇದಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಸಹ ಆತ ಸಜ್ಜಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...