alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಒಪ್ಪಿಗೆಯಿಲ್ಲದ ಸೆಕ್ಸ್ ಮುನ್ನ ಇದು ತಿಳಿದಿರಲಿ

ವಿವಾಹಿತ ಜೀವನಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯ ಅನುಮತಿಯಿಲ್ಲದೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಅದು ವೈವಾಹಿಕ ಅತ್ಯಾಚಾರವಾಗಲಿದೆ ಎಂದು ಕೋರ್ಟ್ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಮಹಿಳೆಯರು ದೂರು ದಾಖಲಿಸಬಹುದು ಎಂದು ಕೋರ್ಟ್ ಹೇಳಿದೆ.

ವೈದ್ಯ ದಂಪತಿ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಪತ್ನಿ ಜೊತೆ ದೈಹಿಕ ಸಂಬಂಧ ಬೆಳೆಸುವುದು ಪತಿ ಹಕ್ಕು. ಆದ್ರೆ ಪತ್ನಿ ಒಪ್ಪಿಗೆಯಿಲ್ಲದೆ ಸಂಬಂಧ ಬೆಳೆಸುವುದು ಅಪರಾಧ ಎಂದು ಕೋರ್ಟ್ ಹೇಳಿದೆ. ಇದು ಕ್ರೌರ್ಯ ವಿಭಾಗಕ್ಕೆ ಬರಲಿದೆ ಎಂದು ಕೋರ್ಟ್ ತಿಳಿಸಿದೆ.

ಒಪ್ಪಿಗೆಯಿಲ್ಲದೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಪತಿ ವಿರುದ್ಧ ಪತ್ನಿ ನ್ಯಾಯದ ಬಾಗಿಲು ತಟ್ಟಬಹುದು. ಅಸ್ವಾಭಾವಿಕ ಸೆಕ್ಸ್ ಕೂಡ ಅಪರಾಧವಾಗಿದ್ದು, ಪತ್ನಿ ಪತಿ ವಿರುದ್ಧ ದೂರು ನೀಡಬಹುದು ಎಂದು ಕೋರ್ಟ್ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...