alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಕೋಶ ಕಸಿ ನಂತ್ರ ಮಗುವಿಗೆ ಜನ್ಮ ನೀಡಲಿದ್ದಾಳೆ ಮಹಿಳೆ

ಭಾರತೀಯ ವೈದ್ಯಕೀಯ ಇತಿಹಾಸದಲ್ಲಿ ದಾಖಲೆ ನಿರ್ಮಾಣವಾಗಲಿದೆ. ಗರ್ಭಾಶಯ ಕಸಿ ಮಾಡಿಸಿಕೊಂಡ ಮಹಿಳೆಯೊಬ್ಬಳು ಶೀಘ್ರವೇ ಮಗುವಿಗೆ ಜನ್ಮ ನೀಡಲಿದ್ದಾಳೆ. ಆಕೆ 20 ವಾರಗಳ ಗರ್ಭಿಣಿಯಾಗಿದ್ದು, ಆರೋಗ್ಯವಾಗಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.

ಗುಜರಾತ್ ಮೂಲದ 28 ವರ್ಷದ ಮಹಿಳೆಗೆ ಆಕೆ ತಾಯಿಯೇ ಗರ್ಭಶಾಯ ದಾನ ಮಾಡಿದ್ದಳು. ಗರ್ಭಾಶಯವಿಲ್ಲದ ಕಾರಣ ಮಹಿಳೆ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿರಲಿಲ್ಲ. ತನ್ನದೇ ಮಗುವಿಗೆ ಜನ್ಮ ನೀಡುವ ಆಸೆಯನ್ನು ಮಹಿಳೆ ಹೊಂದಿದ್ದಳು. ಕೆಲ ತಿಂಗಳುಗಳ ಹಿಂದೆ ಪುಣೆಯ ಗ್ಯಾಲಕ್ಸಿ ಕೇರ್ ಲಿಪ್ರೋಪಿ ಆಸ್ಪತ್ರೆಯಲ್ಲಿ ಮಹಿಳೆಗೆ ಗರ್ಭಕೋಶ ಕಸಿ ನಡೆದಿತ್ತು.

ಗ್ಯಾಲಕ್ಸಿ ಕೇರ್ ಲಿಪ್ರೋಪಿ ಆಸ್ಪತ್ರೆಯ ನಿರ್ದೇಶಕ ಡಾ. ಶೈಲೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡಾ.ಶೈಲೇಶ್ ನೇತೃತ್ವದ 12 ವೈದ್ಯರ ತಂಡ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದರು. ಸತತ ನಾಲ್ಕು ಗಂಟೆಗಳ ಕಾಲ ಗರ್ಭಕೋಶ ಬೇರ್ಪಡಿಸುವ ಕಾರ್ಯ ನಡೆದಿತ್ತು.

ಗರ್ಭಕೋಶ ಕಸಿ ಮಾಡಿಸಿಕೊಂಡ ಮಹಿಳೆ ಈಗ ಗರ್ಭವತಿ. ನಾನು ಜನಿಸಿದ ಗರ್ಭಾಶಯದಲ್ಲಿಯೇ ನನ್ನ ಮಗು ಬೆಳೆಯುತ್ತಿದೆ. ಇದು ಖುಷಿ ವಿಚಾರವೆಂದು ಮಹಿಳೆ ಹೇಳಿದ್ದಾಳೆ. ಸ್ವಿಡನ್ ಹಾಗೂ ಅಮೆರಿಕಾದಲ್ಲಿ ಗರ್ಭಕೋಶ ಕಸಿ ಮಾಡಿಸಿಕೊಂಡ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಆದ್ರೆ ಭಾರತ ಹಾಗೂ ಏಷ್ಯಾದಲ್ಲಿಯೇ ಇದು ಮೊದಲ ಘಟನೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...