alex Certify
ಕನ್ನಡ ದುನಿಯಾ       Mobile App
       

Kannada Duniya

ಗಡ್ಡ ಬಂದ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

ಗುಜರಾತಿನ ಅಹಮದಾಬಾದ್ ನಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಪತಿಯೊಬ್ಬ ಪತ್ನಿಗೆ ಗಡ್ಡ ಬಂದಿದೆ ಎನ್ನುವ ಕಾರಣ ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಪತ್ನಿ ಪುರುಷರ ಧ್ವನಿಯಲ್ಲಿ ಮಾತನಾಡ್ತಾಳೆ ಎಂದು ಪತಿ ಕೋರ್ಟ್ ಮುಂದೆ ಹೇಳಿದ್ದಾನೆ. ಆದ್ರೆ ಕೋರ್ಟ್ ನಿರ್ಧಾರ ಪತಿಯ ನಿರಾಶೆಗೆ ಕಾರಣವಾಗಿದೆ.

ರೂಪೇಶ್ (ಹೆಸರು ಬದಲಿಸಲಾಗಿದೆ) ಎಂಬ ವ್ಯಕ್ತಿ ಪತ್ನಿ ರೂಪಾ ( ಹೆಸರು ಬದಲಿಸಲಾಗಿದೆ)ಳನ್ನು ಮೊದಲು ನೋಡಲು ಹೋದಾಗ ಸಂಪ್ರದಾಯದ ಹೆಸರಿನಲ್ಲಿ ರೂಪಾ ಮನೆಯವರು ಹುಡುಗಿ ಮುಖ ತೋರಿಸಿರಲಿಲ್ಲವಂತೆ. ಆತುರಾತುರವಾಗಿ ಮದುವೆ ಮಾಡಿದ್ದರಂತೆ. ಮದುವೆ ದಿನ ಕೂಡ ರೂಪೇಶ್ ರೂಪಾ ಮುಖ ನೋಡಿರಲಿಲ್ಲವಂತೆ.

ರೂಪೇಶ್, ರೂಪಾ ಮುಖ ನೋಡಿದಾಗ ಆಕೆ ಮೇಕಪ್ ಮಾಡಿಕೊಂಡಿದ್ದಳಂತೆ. ಮದುವೆಯಾಗಿ 5ನೇ ದಿನಕ್ಕೆ ರೂಪೇಶ್ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದನಂತೆ. ಮನೆಗೆ ಬಂದಾಗ ರೂಪಾಗೆ ಗಡ್ಡ ಬೆಳೆಯುತ್ತಿರುವುದು ತಿಳಿದಿದೆಯಂತೆ. ಜೊತೆಗೆ ರೂಪಾ ಧ್ವನಿ ಕೂಡ ವಿಚಿತ್ರವಾಗಿತ್ತಂತೆ.

ಈ ಸಂಬಂಧ ರೂಪಾ ಮನೆಯವರನ್ನು ಕೇಳಿದ್ರೆ ಅವ್ರು ಯಾವುದೇ ಉತ್ತರ ನೀಡಿಲ್ಲವಂತೆ. ಹಾಗಾಗಿ ರೂಪೇಶ್ ಕೋರ್ಟ್ ಮೆಟ್ಟಿಲೇರಿದ್ದ. ರೂಪೇಶ್ ಸುಳ್ಳು ಹೇಳ್ತಿದ್ದಾನೆ. ನನಗೆ ಸದಾ ಹೊಡೆಯುತ್ತಾನೆಂದು ಆರೋಪ ಮಾಡಿದ ರೂಪಾ, ರೂಪೇಶ್ ತಿಂಗಳಿಗೆ 20 ಸಾವಿರ ರೂಪಾಯಿ ನನಗೆ ನೀಡಲಿ, ಇಲ್ಲವೆ ನನ್ನನ್ನು ಪತ್ನಿ ಎಂದು ಸ್ವೀಕರಿಸಲಿ ಎಂದಿದ್ದಾಳೆ. ವಿಚಾರಣೆ ನಡೆಸಿದ ಕೋರ್ಟ್ ಇಂಥ ಕಾರಣಕ್ಕೆ ವಿಚ್ಛೇದನ ನೀಡಲು ಸಾಧ್ಯವಿಲ್ಲವೆಂದು ರೂಪೇಶ್ ಅರ್ಜಿ ವಜಾ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...