alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನದ ಮುಂದೆ ಸ್ವೈಪ್ ಮಷಿನ್– ಡಿಜಿಟಲ್ ಆಗ್ತಿದೆ ದೇವಸ್ಥಾನ

cashless-daan

ದೇವರಿಗೂ ನೋಟು ನಿಷೇಧದ ಬಿಸಿ ತಟ್ಟಿದೆ. ನೋಟು ನಿಷೇಧದ ನಂತ್ರ ದೇವಸ್ಥಾನಕ್ಕೆ ಬರುವ ದೇಣಿಗೆ ಪ್ರಮಾಣ ಗಣನೀಯವಾಗಿ ಇಳಿದಿದೆ. ಇದನ್ನು ಮನಗಂಡಿರುವ ದೇವಸ್ಥಾನದ ಆಡಳಿತ ಮಂಡಳಿಗಳು ಡಿಜಿಟಲ್ ವ್ಯವಸ್ಥೆಗೆ ಒತ್ತು ನೀಡ್ತಾ ಇವೆ.

ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ಇ-ವಾಲೆಟ್ ಶುರುಮಾಡಲಾಗಿದೆ. ಪುರಿ ಜಗನ್ನಾಥ ಮಂದಿರದಲ್ಲಿ ಸಿಬ್ಬಂದಿಗೆ ಚೆಕ್ ಮೂಲಕ ಸಂಬಳ ನೀಡಲಾಗ್ತಾ ಇದೆ. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ಹಾಗೂ ಗುಜರಾತ್ ನ ಶ್ರೀನಾಥ ಮಂದಿರಗಳಲ್ಲಿ ಪೇಟಿಎಂ ಜೊತೆ ಮಾತುಕತೆ ನಡೆಸಿ ಇ-ವಾಲೆಟ್ ಮೂಲಕ ಭಕ್ತರಿಂದ ದೇಣಿಗೆ ಸ್ವೀಕರಿಸಲಾಗ್ತಾ ಇದೆ.

ರಾಯ್ಪುರದ ಮಂದಿರವೊಂದರ ಮುಖ್ಯ ದ್ವಾರದ ಬಳಿ ಸ್ವೈಪ್ ಮಷಿನ್ ಅಳವಡಿಸಲಾಗಿದೆ. ಭಕ್ತರು ಈ ಮಷಿನ್ ಮೂಲಕ ಹಣ ಸಂದಾಯ ಮಾಡಬಹುದಾಗಿದೆ. ಗುಜರಾತಿನ ಅನೇಕ ದೇವಸ್ಥಾನಗಳಲ್ಲಿ ಡಿಜಿಟಲ್ ದೇಣಿಗೆ ಸ್ವೀಕರಿಸಲಾಗ್ತಾ ಇದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಅಂಬಾಜಿ ಮಂದಿರದಲ್ಲಿ ಸ್ವೈಪ್ ಮಷಿನ್ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. ಜೊತೆಗೆ ಪತ್ನಿ ಡೆಬಿಟ್ ಕಾರ್ಡ್ ನಲ್ಲಿ 31 ಸಾವಿರ ರೂಪಾಯಿಯನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಒಟ್ಟಿನಲ್ಲಿ ಭಾರತದ ದೇವಸ್ಥಾನಗಳು ಈಗ ಡಿಜಿಟಲ್ ಆಗ್ತಾ ಇದ್ದು, ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡ್ತಾ ಇವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...