alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿಗೆ ಹೊಡೆದು ಪತಿಗೆ ಬ್ಲಾಕ್ಮೇಲ್ ಮಾಡ್ತಾಳೆ ಪತ್ನಿ

ತಂದೆ ಕ್ರೂರಿಯಾಗಿರಬಹುದು ಆದ್ರೆ ಮಕ್ಕಳ ವಿಚಾರದಲ್ಲಿ ತಾಯಿ ಎಂದೂ ಕ್ರೂರಿಯಾಗಲು ಸಾಧ್ಯವಿಲ್ಲ ಎಂಬ ಮಾತಿದೆ. ಗುಜರಾತಿನ ತಾಯಿಯೊಬ್ಬಳ ವಿಚಾರದಲ್ಲಿ ಇದು ಸುಳ್ಳಾಗಿದೆ. ವಿಚ್ಛೇದಿತ ತಾಯಿಯೊಬ್ಬಳು ಮಗುವನ್ನು ಕಟ್ಟಿಹಾಕಿ, ಹೊಡೆದು ವಿಡಿಯೋ ಮಾಡಿ ಪತಿಗೆ ಕಳುಹಿಸುತ್ತಿದ್ದಳಂತೆ.

ಘಟನೆ ಸೂರತ್ ನ ಡಿಂಡೋಲಿಯಲ್ಲಿ ನಡೆದಿದೆ. ಅಲ್ಲಿನ ಮಹಿಳೆಯೊಬ್ಬಳು ನಾಲ್ಕು ವರ್ಷದ ಮಗುವನ್ನು ಕಟ್ಟಿ ಹಾಕಿ ಮನಸ್ಸಿಗೆ ಬಂದಂತೆ ಥಳಿಸುತ್ತಿದ್ದಳು. ಅದನ್ನು ವಿಡಿಯೋ ಮಾಡಿ ಪತಿಗೆ ಕಳುಹಿಸುತ್ತಿದ್ದಳು. ಮಹಿಳೆ ಕ್ರೌರ್ಯದ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಚ್ಛೇದಿತ ಪತಿ ಈ ವಿಡಿಯೋ ವೈರಲ್ ಮಾಡಿದ್ದಾನೆ. ಮೂರುವರೆ ವರ್ಷಗಳ ಹಿಂದೆ ವಿಚ್ಛೇದನವಾಗಿದೆಯಂತೆ. ಮಾಜಿ ಪತಿ ಅನೇಕ ಬಾರಿ ಮನೆ ಸಾಮಾನು ಹಾಗೂ ಹಣವನ್ನು ಮಾಜಿ ಪತ್ನಿಗೆ ನೀಡಿದ್ದಾನಂತೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಿರುವ ಪತ್ನಿ ಮಗುವಿಗೆ ಹೊಡೆಯುತ್ತಾಳಂತೆ. ಮಗುವನ್ನು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕ್ತಾಳಂತೆ. ಇದ್ರಿಂದ ಬೇಸತ್ತ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಆದ್ರೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...