alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಚಾರದ ಕೊನೆ ದಿನ ಜಗನ್ನಾಥ ಮಂದಿರದಲ್ಲಿ ರಾಹುಲ್

ಗುಜರಾತ್ ಎರಡನೇ ಹಂತದ ಮತದಾನಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮತದಾರರನ್ನು ಒಲಿಸಿಕೊಳ್ಳಲು ಕೆಲವೇ ಗಂಟೆಗಳು ಬಾಕಿ ಇರುವುದ್ರಿಂದ ರಾಜಕೀಯ ನಾಯಕರ ಪ್ರಚಾರ ಮತ್ತಷ್ಟು ಚುರುಕು ಪಡೆದಿದೆ.

ಒಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಹಮದಾಬಾದ್ ನ ತಾಯಿ ಅಂಬಾ ದರ್ಶನ ಪಡೆದ್ರೆ ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜಗನ್ನಾಥನ ಆಶೀರ್ವಾದ ಪಡೆದಿದ್ದಾರೆ. ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಪೂಜೆ-ಅರ್ಚನೆ ಮಾಡಿ ಪ್ರಸಾದ ಸ್ವೀಕರಿಸಿ, ತಿಲಕವಿಟ್ಟಿದ್ದಾರೆ.

ರಾಹುಲ್ ಗಾಂಧಿ ಗುಜರಾತ್ ನಲ್ಲಿ ಪ್ರಚಾರ ಕಾರ್ಯ ಆರಂಭಿಸುವ ಮುನ್ನ ದ್ವಾರಕಾಧೀಶನ ದರ್ಶನ ಪಡೆದು ತಿಲಕವಿಟ್ಟಿದ್ದರು. ಪ್ರಚಾರದ ಕೊನೆಯ ದಿನ ಕೂಡ ಜಗನ್ನಾಥನ ದರ್ಶನ ಮಾಡಿ ಪ್ರಚಾರ ಕಾರ್ಯ ಮುಗಿಸುತ್ತಿದ್ದಾರೆ. ಬಹಿರಂಗ ಪ್ರಚಾರದ ಕೊನೆ ದಿನವಾದ ಇಂದು ರಾಹುಲ್ ಗಾಂಧಿ ಅಹಮದಾಬಾದ್ ನಲ್ಲಿರಲಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮಾಧ್ಯಮದ ಜೊತೆ ಕೂಡ ರಾಹುಲ್ ಮಾತುಕತೆ ನಡೆಸಲಿದ್ದಾರೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...