alex Certify
ಕನ್ನಡ ದುನಿಯಾ       Mobile App
       

Kannada Duniya

ನವಸರ್ಜನ್ ಯಾತ್ರೆಯಲ್ಲಿ ಗುಜರಾತ್ ಸಂಸ್ಕೃತಿ ಅರಿತ ರಾಹುಲ್

ಗುಜರಾತ್ ವಿಧಾನಸಭೆ ಚುನಾವಣೆ ಹತ್ತಿರ ಬರ್ತಿದ್ದಂತೆ ಪ್ರಚಾರದ ಭರಾಟೆ ಕೂಡ ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷದ ನಾಯಕರು ಗುಜರಾತ್ ನಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಕಾಂಗ್ರೆಸ್ ನವಸರ್ಜನ್ ಯಾತ್ರೆ ಸೋಮವಾರ ಅಂತ್ಯವಾಗಲಿದೆ. ಗುಜರಾತ್ ಪ್ರವಾಸದಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾತ್ರೆ ಹೆಸರಿನಲ್ಲಿ ಗುಜರಾತ್ ಸಂಸ್ಕೃತಿಯನ್ನು ಕಣ್ತುಂಬಿಕೊಂಡಿದ್ದಾರೆ.

ಭಾನುವಾರ ರಾತ್ರಿ ಪಾಟ್ನಾದ ಡಾಬಾಕ್ಕೆ ಹೋದ ರಾಹುಲ್ ಗಾಂಧಿ ಗುಜರಾತಿನ ಸಾಂಪ್ರದಾಯಿಕ ಅಡುಗೆಯ ರುಚಿ ನೋಡಿದ್ರು. ರಾಗಿ ರೊಟ್ಟಿ, ಅರಿಶಿನ ಬೆಳ್ಳುಳ್ಳಿ ಚಟ್ನಿ ಸೇವಿಸಿದ್ರು. ಸಾಂಪ್ರದಾಯದಂತೆ ಕಾಟ್ ಮೇಲೆ ಕುಳಿತು ಆಹಾರ ಸೇವನೆ ಮಾಡಿದ ರಾಹುಲ್ ಒಂದು ಗಂಟೆಗಳ ಕಾಲ ಗುಜರಾತ್ ಹಾಡನ್ನು ಕೇಳಿದ್ರು.

ರಾಹುಲ್ ಯಾತ್ರೆ ಹೆಸರಿನಲ್ಲಿ ಜನರಿಗೆ ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ಗುಜರಾತಿನ ಬುಡಕಟ್ಟು ಜನಾಂಗದಿಂದ ಹಿಡಿದು ಶ್ರೀಸಾಮಾನ್ಯರ ಬದುಕನ್ನು ಅರಿಯುವ ಯತ್ನ ಮಾಡಿದ್ದಾರೆ. ಯಾತ್ರೆ ಮಧ್ಯೆ ರಸ್ತೆ ಬದಿಯಲ್ಲಿರುವ ಅಂಗಡಿಗಳಿಗೆ ತೆರಳಿ ಶ್ರೀಸಾಮಾನ್ಯನಂತೆ ಅಲ್ಲಿನ ಆಹಾರದ ರುಚಿ ನೋಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...