alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಚ್ಚ ರೈಲು ನಿಲ್ದಾಣ: ಗುಜರಾತ್ ಬೆಸ್ಟ್- ಬಿಹಾರ್ ವರ್ಸ್ಟ್

gujarat-has-cleanest-railway-stations-bihar-dirtiestಗುಜರಾತ್ ರಾಜ್ಯ, ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಸ್ವಚ್ಛತೆ ಕಾಯ್ದುಕೊಂಡಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ನಿಲ್ದಾಣದಲ್ಲಿ ಅತೀ ಹೊಲಸು ತುಂಬಿದೆ. ಇದು ಪ್ರಯಾಣಿಕರೇ ನೀಡಿದ ತೀರ್ಪು.

ರೈಲ್ವೆ ಪ್ರಾಧಿಕಾರ ಸ್ವಚ್ಛತೆಯ ಕುರಿತು ಕೈಗೊಂಡ ಸರ್ವೇಯಲ್ಲಿ ಪ್ರಯಾಣಿಕರಿಂದ ಈ ಉತ್ತರ ಸಿಕ್ಕಿದೆ. ಜನ, ಗುಜರಾತ್ ರೈಲ್ವೆ ನಿಲ್ದಾಣ ಸಂಪೂರ್ಣ ಸ್ವಚ್ಛತೆಯಿಂದ ಕೂಡಿದೆ. ಆದರೆ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ನಿಲ್ದಾಣಗಳು ತೀರ ಕೊಳಕಾಗಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸುಮಾರು 407 ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡ ಸರ್ವೇಯಲ್ಲಿ ಹೆಚ್ಚಿನ ನಿಲ್ದಾಣಗಳಲ್ಲಿ ಕಸದ ಬುಟ್ಟಿಯ ಕೊರತೆ, ಸ್ವಚ್ಛತೆ ಇಲ್ಲದ ಫ್ಲಾಟ್ ಫಾರ್ಮ್ ಕುರಿತು ಪ್ರಯಾಣಿಕರು ಗಮನ ಸೆಳೆದಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲ ನಿಲ್ದಾಣಗಳಿಗೆ ಭೇಟಿ ನೀಡಿದ ತನಿಖಾಧಿಕಾರಿಗಳು, ಜನರ ಪ್ರತಿಕ್ರಿಯೆಯನ್ನು ಪಡೆದಿದ್ದು, ಈಗ ಸಮಸ್ಯೆ ಪರಿಹರಿಸುವತ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...