alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ವಿಚಿತ್ರ, ಆದರೂ ಸತ್ಯ…!

ಅಹ್ಮದಾಬಾದ್: ಇದು ವಿಚಿತ್ರ, ಆದರೂ ಸತ್ಯ. ಗುಜರಾತಿ ವಿಷಯದ ಎಂಫಿಲ್ ಪರೀಕ್ಷೆಯ ಎಲ್ಲ ಉತ್ತರವೂ ‘ಎ’ ಆಯ್ಕೆಯಲ್ಲೇ ಇದ್ದವು. ಅದೇ ರೀತಿ ಪಿಎಚ್ ಡಿ ಪರೀಕ್ಷೆಯಲ್ಲಿ ‘ಸಿ’ ಆಯ್ಕೆಯಲ್ಲಿ ಎಲ್ಲ ಉತ್ತರಗಳಿದ್ದವು. ಸಾಮಾನ್ಯವಾಗಿ ಬಹು ಆಯ್ಕೆ ಉತ್ತರ ನೀಡಿರುವ ಪ್ರಶ್ನೆ ಪತ್ರಿಕೆಯಲ್ಲಿ ಉತ್ತರದ ಆಯ್ಕೆಗಳು ಒಂದೇ ಕ್ರಮಾಂಕದಲ್ಲಿ ಇರುವುದಿಲ್ಲ.

ಉತ್ತರಗಳನ್ನು ಎ, ಬಿ, ಸಿ, ಡಿ ಕ್ರಮಾಂಕದ ಪೈಕಿ ಒಂದರಲ್ಲಿ ನೀಡಲಾಗುತ್ತದೆ. ಆದರೆ ಗುಜರಾತಿಯ ಪಿಎಚ್ ಡಿ, ಎಂಫಿಲ್ ಪರೀಕ್ಷೆಯಲ್ಲಿ ಒಂದೇ ಕ್ರಮಾಂಕದಲ್ಲಿ ಉತ್ತರ ನೀಡಿ ಹೊಸ ಪ್ರಯೋಗ ಮಾಡಲಾಗಿದೆ.

ಈ ಪ್ರಯೋಗದ ಬಗ್ಗೆ ಮಾಹಿತಿ ನೀಡಿರುವ ಗುಜರಾತಿ ವಿಭಾಗದ ಮುಖ್ಯಸ್ಥ ಕೀರ್ತಿದಾ ಶಾ, ವಿಷಯದ ಬಗ್ಗೆ ಸರಿಯಾದ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳಿಗೆ ಇದು ವಿಶೇಷ ಎನಿಸಲ್ಲ. ಸರಿಯಾಗಿ ಓದಿಕೊಂಡವರು ಸರಿಯಾದ ಉತ್ತರ ನೀಡುತ್ತಾರೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...