alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ನಲ್ಲಿ ವರ್ಕೌಟ್ ಆಗಿದೆ ರಾಹುಲ್ ಬಳಸಿದ ಈ ಬ್ರಹ್ಮಾಸ್ತ್ರ

ನವದೆಹಲಿ: ದೇಶದ ಗಮನ ಸೆಳೆದಿದ್ದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದಿದೆ. ಕಳೆದ ಚುನಾವಣೆಗಿಂತ ಬಿ.ಜೆ.ಪಿ. ಈ ಬಾರಿ ಕಡಿಮೆ ಸ್ಥಾನಗಳನ್ನು ಪಡೆದಿದ್ದು, ಕೆಲವು ಕಡೆ ಪ್ರಯಾಸದ ಗೆಲುವು ಕಂಡಿದೆ.

ಇದೇ ವೇಳೆ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಚುನಾವಣೆಯಲ್ಲಿ ಬಳಸಿದ ಕಾರ್ಯತಂತ್ರ.

ಗುಜರಾತ್ ಚುನಾವಣೆಯ ಯಶಸ್ಸಿಗೆ ಮೊದಲಿನಿಂದಲೇ ಕಾರ್ಯತಂತ್ರ ರೂಪಿಸಿದ್ದ ರಾಹುಲ್, ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ, ಪ್ರಚಾರದ ಶೈಲಿ ಹೀಗೆ ಪ್ರತಿಯೊಂದು ಹಂತದಲ್ಲಿಯೂ ಎಚ್ಚರಿಕೆ ವಹಿಸಿದ್ದರು. ಈ ಬಾರಿ ಅವರು ವಿಶೇಷವಾಗಿ ಮೃದು ಹಿಂದುತ್ವದ ಬ್ರಹ್ಮಾಸ್ತ್ರ ಬಳಸಿದ್ದಾರೆ. ಇದು ತಕ್ಕಮಟ್ಟಿಗೆ ಯಶಸ್ಸು ಕೊಟ್ಟಿದೆ.

ರಾಹುಲ್ ಗಾಂಧಿ ದೇವಾಲಯಗಳಿಗೆ ಭೇಟಿ ನೀಡಿದ್ದ 18 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ರಾಹುಲ್ ದೇವಾಲಯಕ್ಕೆ ಭೇಟಿ ನೀಡಿದಾಗ ವಿವಾದವನ್ನು ಮಾಡಲಾಗಿತ್ತು. ಇದಕ್ಕೆ ತಲೆಕೆಡಿಸಿಕೊಳ್ಳದ ರಾಹುಲ್ ನಿರಂತರವಾಗಿ ತಾವು ಪ್ರಚಾರಕ್ಕೆ ತೆರಳಿದ ಸ್ಥಳಗಳಲ್ಲಿನ ದೇವಾಲಯಗಳಿಗೆ ಭೇಟಿ ನೀಡಿದ್ದರು. ತಮ್ಮ ಕುಟುಂಬದವರು ಶಿವನ ಭಕ್ತರು ಎಂದು ಹೇಳಿಕೊಂಡಿದ್ದರು. ಇದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

ರಾಹುಲ್ ಗಾಂಧಿ ದೇವಾಲಯಗಳನ್ನು ಸಂದರ್ಶಿಸಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ 18 ಸ್ಥಾನಗಳಲ್ಲಿ ಜಯಗಳಿಸಿದೆ. ಇದರಲ್ಲಿ ಬಿ.ಜೆ.ಪಿ.ಯಿಂದ 10 ಕ್ಷೇತ್ರಗಳನ್ನು ಕಸಿದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ರಾಹುಲ್ ಬಳಸಿದ ಮೃದು ಹಿಂದುತ್ವ ಅಸ್ತ್ರ ವರ್ಕೌಟ್ ಆಗಿದೆ ಎನ್ನಬಹುದಾಗಿದೆ.

ರಾಹುಲ್ ಗಾಂಧಿ ಸೆಪ್ಟಂಬರ್ 25 ರಂದು ದ್ವಾರಕಾ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರವನ್ನು ಆರಂಭಿಸಿದ್ದರು. ದ್ವಾರಕಾದಲ್ಲಿ ಕಾಂಗ್ರೆಸ್ ಗೆದ್ದಿಲ್ಲವಾದರೂ, ಅವರು ದೇವಾಲಯಗಳಿಗೆ ಭೇಟಿ ನೀಡಿದ್ದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಯಶಸ್ಸು ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...