alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುವಾಗ್ಲೇ ಮಗುವಿಗೆ ಬಂದಿತ್ತು ಹಲ್ಲು

ಅಹಮದಾಬಾದ್ ನಲ್ಲಿ ಗಂಡು ಮಗುವೊಂದಕ್ಕೆ ಹುಟ್ಟುವಾಗ್ಲೇ ಹಲ್ಲುಗಳಿದ್ವು. ಒಂದು ತಿಂಗಳ ಬಳಿಕ ಶಿಶುವಿನ ಬಾಯಲ್ಲಿದ್ದ 7 ಹಲ್ಲುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಎರಡು ಶಸ್ತ್ರಚಿಕಿತ್ಸೆ ಮೂಲಕ ಹಲ್ಲುಗಳನ್ನು ತೆಗೆದು ಹಾಕಲಾಗಿದೆ.

ಮಗುವಿನ ಬಾಯಲ್ಲಿದ್ದ ಹಲ್ಲುಗಳು ಅಲುಗಾಡುತ್ತಿದ್ವು. ಇದರಿಂದಾಗಿ ಹಾಲುಣಿಸುವುದು ಕೂಡ ಕಷ್ಟವಾಗುತ್ತಿತ್ತು. ಸ್ನೇಹಿತರು ಮತ್ತು ಸಂಬಂಧಿಕರ ಸಲಹೆ ಮೇರೆಗೆ ಹೆತ್ತವರು ವೈದ್ಯರನ್ನು ಭೇಟಿ ಮಾಡಿದ್ರು. 15 ನಿಮಿಷಗಳ ಆಪರೇಷನ್ ಮಾಡಿ ಹಲ್ಲುಗಳನ್ನು ಕಿತ್ತು ಹಾಕಲಾಗಿದೆ.

ಹುಟ್ಟುವಾಗ್ಲೇ ಮಗುವಿಗೆ ಹಲ್ಲುಗಳಿರೋದನ್ನು ನೋಡಿರುವುದು ಇದೇ ಮೊದಲ ಬಾರಿ ಅಂತಾ ವೈದ್ಯರು ಹೇಳಿದ್ದಾರೆ. ಅಷ್ಟೇ ಅಲ್ಲ ಕೇವಲ ಒಂದು ತಿಂಗಳ ಶಿಶುವಾಗಿದ್ರಿಂದ ಚಿಕಿತ್ಸೆ ಕೂಡ ಕಠಿಣವಾಗಿತ್ತು. ಹಲ್ಲುಗಳು ಅಲುಗಾಡುತ್ತಿದ್ದುದ್ರಿಂದ, ಮಗು ಅದನ್ನು ನುಂಗಿಬಿಡುವ ಅಪಾಯವೂ ಇತ್ತು. ಹಾಗಾಗಿ ಅತ್ಯಂತ ಶೀಘ್ರವಾಗಿ ಆಪರೇಷನ್ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...