alex Certify
ಕನ್ನಡ ದುನಿಯಾ       Mobile App
       

Kannada Duniya

18,000 ವಿಧವೆಯರಿಂದ ಆಶೀರ್ವಾದ ಪಡೆದ ನವ ದಂಪತಿಗಳು

50752050

ಗುಜರಾತ್: ವಿಧವೆಯರನ್ನು ಸಮಾಜದಲ್ಲಿ ಇಂದಿಗೂ ತಾರತಮ್ಯ ಭಾವದಿಂದ ಕಾಣಲಾಗುತ್ತದೆ. ಕೆಲವೆಡೆ ಶುಭ ಸಮಾರಂಭಗಳಿಗೆ ಅವರನ್ನು ಆಹ್ವಾನಿಸದೆ ಕಡೆಗಣಿಸಲಾಗುತ್ತದೆ. ಇಂತಹ ಕಂದಾಚಾರವನ್ನು ನಿರ್ಮೂಲನೆ ಮಾಡಲೆಂದೇ ಗುಜರಾತಿನ ಉದ್ಯಮಿಯೊಬ್ಬರು ತಮ್ಮ ಪುತ್ರನ ಮದುವೆಗೆ 18,000 ಮಂದಿ ವಿಧವೆಯರನ್ನು ಆಹ್ವಾನಿಸಿ ಅವರಿಂದ ನವ ದಂಪತಿಗಳಿಗೆ ಆಶೀರ್ವಾದ ಮಾಡಿಸಿದ್ದಾರೆ.

ಇಂತದೊಂದು ಸಾರ್ಥಕ ಕಾರ್ಯ ಮಾಡಿರುವುದು ಗುಜರಾತಿನ ಮೆಹ್ಸಾನಾ ಮೂಲದ ಉದ್ಯಮಿ ಜಿತೇಂದರ್ ಪಟೇಲ್. ತಮ್ಮ ಪುತ್ರನ ವಿವಾಹ ಸಮಾರಂಭಕ್ಕೆ ಸುತ್ತಮುತ್ತಲ 5 ಜಿಲ್ಲೆಗಳ 18,000 ವಿಧವೆಯರನ್ನು ಜಿತೇಂದರ್ ಪಟೇಲ್ ಆಹ್ವಾನಿಸಿದ್ದರು. ಈ ವಿವಾಹ ಸಮಾರಂಭದಲ್ಲಿ ವಿಧವೆಯರಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತು.

ನವ ದಂಪತಿಗಳಿಗೆ ಆಶೀರ್ವದಿಸಿದ ಈ ವಿಧವೆಯರಿಗೆ ಸತ್ಕರಿಸಿದ ಜಿತೇಂದರ್ ಪಟೇಲ್ ಅವರುಗಳಿಗೆ ಉಡುಗೊರೆಯನ್ನೂ ನೀಡಿದ್ದಾರೆ. ಜೊತೆಗೆ ಪ್ರತಿಯೊಬ್ಬರಿಗೂ ಸಸಿ ನೀಡಿ ಅವುಗಳನ್ನು ನೆಟ್ಟು ಪೋಷಿಸುವಂತೆ ಮನವಿ ಮಾಡಿದ್ದಾರೆ. ಕಡು ಬಡತನದಲ್ಲಿದ್ದ 500 ಮಂದಿ ವಿಧವೆಯರಿಗೆ ಹಸುವನ್ನು ಪುತ್ರನ ವಿವಾಹ ಸಮಾರಂಭದಲ್ಲಿ ಉಡುಗೊರೆಯಾಗಿ ನೀಡಿದ ಜಿತೇಂದರ್ ಪಟೇಲ್ ಆರ್ಥಿಕವಾಗಿ ಅವರುಗಳು ಸ್ವಾವಲಂಬಿಯಾಗುವಂತೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...