alex Certify
ಕನ್ನಡ ದುನಿಯಾ       Mobile App
       

Kannada Duniya

ಹಸು ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಬಿಜೆಪಿ ಸಂಸದ

ಗುಜರಾತಿನ ಪಾಟನ್ ಲೋಕಸಭಾ ಸದಸ್ಯ ಲೀಲಾಧರ್ ವಘೇಲಾ ಅವರ ಮೇಲೆ ಹಸು ದಾಳಿ ನಡೆಸಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಗಾಂಧಿನಗರದ ನಿವಾಸದಲ್ಲಿ ಮಧ್ಯಾಹ್ನ ವಾಕಿಂಗ್ ಮಾಡುವಾಗ ಹಸು ತಿವಿದ ಪರಿಣಾಮ ಲೀಲಾಧರ್ ನೆಲಕ್ಕುರುಳಿದ್ದಾರೆ. ಇದನ್ನು ಕಂಡು ಮನೆಯ ಕೆಲಸದವರು ಹಾಗೂ ಸೊಸೆ, ಲೀಲಾಧರ್ ಅವರಿಗೆ ಶುಶ್ರೂಶೆ ಮಾಡಿದ್ದಾರೆ. ಎದ್ದು ನಡೆದಾಡುವ ಸ್ಥಿತಿಯಲ್ಲಿಯೂ ಇರದ ಸಂಸದರನ್ನು ಬಳಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಕ್ಸ್-ರೇ ವರದಿಯಲ್ಲಿ ಲೀಲಾಧರ್ ಅವರ ಪಕ್ಕೆಲುಬುಗಳು ಮುರಿದಿರುವುದು ಕಂಡುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ವೈದ್ಯರು, ಲೀಲಾಧರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಆಸ್ಪತ್ರೆಯ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಲೀಲಾಧರ್ ಮಗ ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...