alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಶಾಸಕರ ಮಾರಾಮಾರಿ ವಿಡಿಯೋ

ಗುಜರಾತ್ ವಿಧಾನಸಭೆಯಲ್ಲಿ ಮಾರಾಮಾರಿ ನಡೆದಿದೆ. ಬಿಜೆಪಿ ಶಾಸಕ ಜಗದೀಶ್ ಪಾಂಚಲ್ ಹಾಗೂ ಕಾಂಗ್ರೆಸ್ ನ ಪ್ರತಾಪ್ ಧುದತ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಅಸಾರಾಂ ಬಾಪು ವಿರುದ್ಧದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಜಸ್ಟಿಸ್ ಡಿ.ಕೆ. ತ್ರಿವೇದಿ ಆಯೋಗದ ವರದಿ ಸಲ್ಲಿಕೆ ಸಂಬಂಧ ಈ ಗದ್ದಲ ನಡೆದಿದೆ.

ಕಾಂಗ್ರೆಸ್ ಶಾಸಕ ವಿಕ್ರಂ ಮದಮ್ ರನ್ನು ವಜಾ ಮಾಡಿದ ಬೆನ್ನಲ್ಲೇ ಶಾಸಕ ಪ್ರತಾಪ್, ಬಿಜೆಪಿಯ ಜಗದೀಶ್ ಪಾಂಚಲ್ ಮೇಲೆ ಮೈಕ್ ನಿಂದ ಹಲ್ಲೆ ಮಾಡಿದ್ದಾರೆ. ಇಷ್ಟಕ್ಕೇ ಗದ್ದಲ ತಣ್ಣಗಾಗಲಿಲ್ಲ.

ಸದನದಲ್ಲಿ ಕುಳಿತಿದ್ದ ಬಿಜೆಪಿ ಶಾಸಕರ ಮೇಲೆ ಹಲ್ಲೆ ಮಾಡಲು ಕಾಂಗ್ರೆಸ್ ನ ಅಮ್ರೀಶ್ ಡೆರ್ ತೆರಳಿದ್ರು. ತಿರುಗಿಬಿದ್ದ ಬಿಜೆಪಿ ಶಾಸಕರು ಅಮ್ರೀಶ್ ಗೆ ಥಳಿಸಿದ್ದಾರೆ. ಪರಿಸ್ಥಿತಿ ಕೈಮೀರಿದ್ದರಿಂದ ಸ್ಥಳಕ್ಕೆ ಗಾಂಧಿನಗರ ಪೊಲೀಸರನ್ನು ಕರೆಸಲಾಯ್ತು. ಬಿಜೆಪಿ ಗದ್ದಲಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ವಿರುದ್ಧ ಸ್ಪೀಕರ್ ಗೆ ದೂರು ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...