alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಚುನಾವಣಾ ಜಾಹೀರಾತಿನ ವಿರುದ್ಧ ಆಯೋಗಕ್ಕೆ ದೂರು

ಗುಜರಾತ್ ಚುನಾವಣೆಗೆ ಸಂಬಂಧಪಟ್ಟ ಜಾಹೀರಾತೊಂದು ಕೋಮುವಾದಿ ಭಾವನೆ ಹುಟ್ಟುಹಾಕುವಂತಿದೆ ಅಂತಾ ಅಹಮದಾಬಾದ್ ನ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಜಾಹೀರಾತು, ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಿದೆ ಅಂತಾನೂ ಆರೋಪಿಸಲಾಗಿದೆ.

ಮಹಿಳೆಯೊಬ್ಬಳು ಒಂಟಿಯಾಗಿ ನಡೆದುಕೊಂಡು ಬರುತ್ತಿರುತ್ತಾಳೆ, ಹಿಂದಿನಿಂದ ಮಸೀದಿಯ ಪ್ರಾರ್ಥನೆ ಕೇಳುತ್ತಿರುತ್ತದೆ. ಇನ್ನೊಂದ್ಕಡೆ ಆಕೆಯ ಹೆತ್ತವರು ಮಗಳ ಬರುವಿಕೆಗಾಗಿ ಕಾದು ನಿಂತಿರ್ತಾರೆ. ಮಗಳು ಸೇಫ್ ಆಗಿ ಮನೆಗೆ ಬಂದು ತಲುಪುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಡ್ತಾರೆ.

ಗುಜರಾತ್ ನಲ್ಲೂ ಈ ರೀತಿ ನಡೆಯುತ್ತಿದ್ಯಾ ಅಂತಾ ಅಚ್ಚರಿಪಡಬೇಡಿ, 22 ವರ್ಷಗಳ ಹಿಂದೆ ಗುಜರಾತ್ ಇದೇ ರೀತಿ ಇತ್ತು, ಈಗ ಮತ್ತೆ ಹಾಗೆಯೇ ಆಗಿದೆ ಎನ್ನುತ್ತಾಳೆ ಆಕೆಯ ತಾಯಿ. ನಂತರ ಕೇಸರಿ ಬಣ್ಣದಲ್ಲಿ ನಿಮ್ಮ ವೋಟ್, ನಿಮ್ಮ ಸುರಕ್ಷತೆ ಎಂಬ ಸಂದೇಶ ಬರುತ್ತದೆ. ಇದು ಜಾಹೀರಾತಿನಲ್ಲಿರುವ ಸಂಪೂರ್ಣ ಸಾರ.

ಬಹುತೇಕ ಎಲ್ಲಾ ಸಮುದಾಯದವರೂ ಮುಸಲ್ಮಾನರಿಂದ ಬೆದರಿದ್ದಾರೆ ಎಂಬಂತೆ ಜಾಹೀರಾತಿನಲ್ಲಿ ಬಿಂಬಿಸಲಾಗಿದೆ ಅಂತಾ ದೂರು ನೀಡಿರುವ ವಕೀಲ ಹೇಳಿದ್ದಾರೆ. ಹಾಗಾಗಿ ಈ ಜಾಹೀರಾತಿಗೆ ನಿರ್ಬಂಧ ಹೇರಬೇಕು ಅನ್ನೋದು ಅವರ ಒತ್ತಾಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...