alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಗುತ್ತಿದೆ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಭೀಕರ ಸತ್ಯ

ಚೆನ್ನೈನ ಅಪಾರ್ಟ್‌ಮೆಂಟ್‌ ನಲ್ಲಿ 11 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಆರೋಪಿಗಳ ಅಸಲಿಯತ್ತು ವಿಚಾರಣೆಯಲ್ಲಿ ಒಂದೊಂದಾಗಿ ಬಯಲಾಗುತ್ತಿದೆ.

17 ಮಂದಿ ಆರೋಪಿಗಳ ಪೈಕಿ, ಒಬ್ಬ ನಿದ್ರೆ ಬರುವ ಇಂಜೆಕ್ಷನ್‌ ಕೊಡುವುದನ್ನು ಬಲ್ಲವನಾಗಿದ್ದ ಎಂದು ಗೊತ್ತಾಗಿದೆ. ಈತನೇ ಮಗುವಿಗೆ ನಿದ್ರೆಯ ಇಂಜೆಕ್ಷನ್‌ ನೀಡುತ್ತಿದ್ದ. ಅಂತೆಯೇ ಉಳಿದವರು ಮತ್ತು ಬರುವ ಸಾಫ್ಟ್‌ ಡ್ರಿಂಕ್‌ ಗಳನ್ನು ಬಾಲಕಿಗೆ ನೀಡುತ್ತಿದ್ದರು ಎಂಬ ಸಂಗತಿಯನ್ನು ಪೊಲೀಸರು ಆರೋಪಿಗಳಿಂದ ಬಾಯಿ ಬಿಡಿಸಿದ್ದಾರೆ.

ಇಂಜೆಕ್ಷನ್‌ ಕೊಡುತ್ತಿದ್ದ ಭದ್ರತಾ ಸಿಬ್ಬಂದಿ, ಅಪಾರ್ಟ್‌ಮೆಂಟ್‌ ನಲ್ಲಿ ಕೆಲಸಕ್ಕೆ ಸೇರುವ ಮುನ್ನ ಆಸ್ಪತ್ರೆಯೊಂದರಲ್ಲಿ ನೌಕರನಾಗಿದ್ದ. ಅಲ್ಲಿ ನಿದ್ರೆ ಬರುವ ಇಂಜೆಕ್ಷನ್‌ ಕೊಡುವ ವಿಧಾನಗಳನ್ನು ತಿಳಿದುಕೊಂಡಿದ್ದಾನೆ. ಅಪಾರ್ಟ್‌ಮೆಂಟ್‌ ಆವರಣದಲ್ಲಿ ಸಿರಿಂಜ್‌ ಹಾಗೂ ಇತರೆ ವಸ್ತುಗಳು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

11 ವರ್ಷದ ಕಿವಿ ಕೇಳದ ಬಾಲಕಿಯನ್ನು ಕಳೆದ 7 ತಿಂಗಳಿನಿಂದ ಅತ್ಯಾಚಾರ ನಡೆಸುತ್ತಿದ್ದರು. ಅಪಾರ್ಟ್‌ಮೆಂಟ್‌ ನ ಸೆಕ್ಯುರಿಟಿ, ಲಿಫ್ಟ್ ಆಪರೇಟರ್‌ ಹಾಗೂ ಪ್ಲಂಬರ್‌ ಗಳು ಬಾಲಕಿಗೆ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ನಡೆಸಿದ್ದಾರೆ.

ಅಪಾರ್ಟ್‌ಮೆಂಟ್‌ ನ ನೆಲಮಹಡಿ, ಶೌಚಾಲಯ, ಜಿಮ್‌, ಟೆರೇಸ್‌ ಇತ್ಯಾದಿ ಸಿಸಿ ಟಿವಿಗೆ ದೃಶ್ಯಗಳು ಸಿಗದ ಭಾಗಗಳಿಗೆ ಬಾಲಕಿಯನ್ನು ಕೊಂಡೊಯ್ದು ಅತ್ಯಾಚಾರ ನಡೆಸಿದ್ದಾರೆ. 66 ವರ್ಷದ ಲಿಫ್ಟ್‌ ಅಪರೇಟರ್‌ ಮೊದಲ ಆರೋಪಿ.

ಬಾಲಕಿ ತನ್ನ ಸಹೋದರಿ ಬಳಿ ನಡೆಯುತ್ತಿರುವ ವಿಚಾರದ ಬಗ್ಗೆ ಹೇಳಿದ್ದು, ಆಕೆ ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಈ ಕುರಿತು ದೂರು ನೀಡಿದ್ದಾರೆ. ಆರೋಪಿಗಳು ತಮ್ಮ ನೀಚ ಕೃತ್ಯವನ್ನು ವಿಡಿಯೋ ಮಾಡಿದ್ದು, ಯಾರಿಗಾದರೂ ಹೇಳಿದರೆ, ವಿಡಿಯೋವನ್ನು ಎಲ್ಲರಿಗೂ ಕಳುಹಿಸುವುದಾಗಿ ಬಾಲಕಿಯನ್ನು ಹೆದರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...