alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಎಸ್ಟಿಆರ್-1 ಪಾವತಿ ವ್ಯಾಪಾರಿಗಳಿಗೆ ಖುಷಿ ಸುದ್ದಿ

ಜಿಎಸ್ಟಿ ಪಾವತಿ ಮಾಡುವ ವ್ಯಾಪಾರಿಗಳಿಗೊಂದು ಖುಷಿ ಸುದ್ದಿ. ರಿಟರ್ನ್ ಜಿಎಸ್ಟಿಆರ್ -1 ಫಾರ್ಮ್ ತುಂಬುವ ಅಂತಿಮ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. 2017 ಜುಲೈನಿಂದ ಸೆಪ್ಟೆಂಬರ್ 2018ರ ರಿಟರ್ನ್ ಜಿಎಸ್ಟಿಆರ್-1 ಪಾವತಿಗೆ ಅಕ್ಟೋಬರ್ 31ರವರೆಗೆ ಸಮಯವಿದೆ.

ನಿಗದಿತ ದಿನಾಂಕ ಮೀರಿ ತೆರಿಗೆ ಪಾವತಿ ಮಾಡುವ ವ್ಯಾಪಾರಿಗಳು ದಂಡ ತುಂಬಬೇಕಾಗಿಲ್ಲ. ಜಿಎಸ್ಟಿಆರ್-3ಬಿ ಫಾರ್ಮ್ ತುಂಬುವವರ ಸಂಖ್ಯೆ ಜೆಎಸ್ಟಿಆರ್-1 ತುಂಬುವವರಿಗಿಂತ ಹೆಚ್ಚಿದೆ. ತೆರಿಗೆದಾರರಿಗೆ ತೆರಿಗೆ ಪಾವತಿ ಮಾಡಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಕ್ಟೋಬರ್ 31 ರೊಳಗೆ ತೆರಿಗೆ ತುಂಬುವ ತೆರಿಗೆದಾರರಿಗೆ ಯಾವುದೇ ವಿಳಂಬ ಶುಲ್ಕ ವಿಧಿಸುವುದಿಲ್ಲವೆಂದು ಸಚಿವಾಲಯ ಹೇಳಿದೆ.

ಜಿಎಸ್ಟಿ ಪ್ರಕಾರ, 1.5 ಕೋಟಿ ವ್ಯವಹಾರ ನಡೆಸುವ ವ್ಯಾಪಾರಿಗಳು ಜಿಎಸ್ಟಿಆರ್-1 ಪಾವತಿಗೆ ಮುಂದಿನ ತಿಂಗಳು 11ರವರೆಗೆ ಅವಕಾಶವಿರುತ್ತದೆ. ಇದೇ ನಿಯಮದ ಪ್ರಕಾರ ಈ ತಿಂಗಳ ತೆರಿಗೆಯನ್ನು ಅಕ್ಟೋಬರ್ 11 ರೊಳಗೆ ನೀಡಬೇಕು. ಆದ್ರೀಗ ಈ ಅವಧಿ ವಿಸ್ತರಣೆಯಾಗಿದೆ. ಅಕ್ಟೋಬರ್ 31ರವರೆಗೆ ಅವಕಾಶವಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...