alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿನಿಂದ ಕಡಿಮೆಯಾಗಲಿದೆ 211 ಉತ್ಪನ್ನಗಳ ಬೆಲೆ

ಹೋಟೆಲ್ ಆಹಾರವೊಂದೇ ಅಲ್ಲ ದಿನಸಿ ಬೆಲೆ ಕೂಡ ಇಂದಿನಿಂದ ಕಡಿಮೆಯಾಗಲಿದೆ. ಚಾಕೋಲೇಟ್, ಟೂತ್ಪೇಸ್ಟ್, ಶಾಂಪೂ, ಬಟ್ಟೆ ಸೋಪು ಸೇರಿದಂತೆ ಅನೇಕ ವಸ್ತುಗಳ ಬೆಲೆ ಇಂದಿನಿಂದ ಇಳಿಕೆಯಾಗಲಿದೆ. ಈ ಎಲ್ಲ ವಸ್ತುಗಳ ತೆರಿಗೆ ಇಳಿಕೆಯಾಗಿದೆ. ಕಳೆದ ವಾರ ಜಿ ಎಸ್ ಟಿ ಕೌನ್ಸಿಲ್ ಈ ವಸ್ತುಗಳ ಮೇಲೆ ವಿಧಿಸಿದ್ದ ಶೇಕಡಾ 28ರಷ್ಟು ತೆರಿಗೆಯನ್ನು ಶೇಕಡಾ 18ಕ್ಕೆ ಇಳಿಸಿದೆ.

ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರಗಳು ಇದಕ್ಕೆ ಸಂಬಂಧಿಸಿದಂತೆ ನೊಟೀಸ್ ಜಾರಿ ಮಾಡಿವೆ. ಹೊಸ ಜಿ ಎಸ್ ಟಿ ನೀತಿ ಮಂಗಳವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬಂದಿದೆ. ಕಳೆದ ವಾರ ಸಭೆ ನಡೆಸಿದ ನಂತ್ರ ನವೆಂಬರ್ 15ರಂದು ಹೊಸ ಜಿ ಎಸ್ ಟಿ ದರ ಜಾರಿಗೆ ಬರಲಿದೆ ಎಂದು ಘೋಷಣೆ ಮಾಡಲಾಗಿತ್ತು. ಸಮಯದ ಅಭಾವದಿಂದಾಗಿ ಕಂಪನಿಗಳು ಉತ್ಪನ್ನದ ಪ್ಯಾಕ್ ಮೇಲೆ ಹಾಕಿರುವ ದರವನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ ಚಿಲ್ಲರೆ ವ್ಯಾಪಾರಿಗಳಿಗೆ ಕಂಪನಿಗಳು ಬೆಲೆ ಕಡಿಮೆ ಮಾಡುವಂತೆ ಸೂಚನೆ ನೀಡಿವೆ.

ವಿದ್ಯುತ್ ಫಲಕ, ತಂತಿ, ಕೇಬಲ್, ಸ್ವಿಚ್, ಫ್ಯೂಸ್, ವಿದ್ಯುತ್ ಕನೆಕ್ಟರ್ಸ್, ಟ್ರಂಕ್, ಸೂಟ್ಕೇಸ್, ಬ್ಯಾಗ್, ಕೈಚೀಲ, ಶಾಂಪೂ, ಹೇರ್ ಕ್ರೀಂ, ಡ್ರೈಯರ್,  ಸುಗಂಧ, ಮೇಕಪ್ ಕಿಟ್, ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಹಾಗೂ ಪಿಂಗಾಣಿ ಸಾಮಾನು, ರೇಜರ್, ರೇಜರ್ ಬ್ಲೇಡ್ ಸೇರಿದಂತೆ 211ಕ್ಕೂ ಹೆಚ್ಚು ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...