alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಎಸ್ಟಿ ಜಾರಿಯಾದ್ರೆ ಇಷ್ಟು ಕಡಿಮೆಯಾಗಲಿದೆ ಪೆಟ್ರೋಲ್ ಬೆಲೆ

ಏರಿದ ಪ್ರಮಾಣದಷ್ಟು ವೇಗವಾಗಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿಲ್ಲ. ನಿಧಾನವಾಗಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಯುತ್ತಿದೆ. 13 ದಿನಗಳಲ್ಲಿ ಒಂದು ರೂಪಾಯಿ 65 ಪೈಸೆಯಷ್ಟು ಮಾತ್ರ ಪೆಟ್ರೋಲ್ ಬೆಲೆ ಇಳಿದಿದೆ. ಹಾಗಾಗಿ ಇದು ವಾಹನ ಸವಾರರ ಸಮಸ್ಯೆಗೆ ಪರಿಹಾರ ನೀಡಿಲ್ಲ.

ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಿಂದ ಜನಸಾಮಾನ್ಯ ಕಂಗೆಟ್ಟಿರುವ ಬೆನ್ನಲ್ಲೇ ಇದನ್ನು ಜಿಎಸ್ಟಿಗೊಳಪಡಿಸಬೇಕೆಂಬ ಕೂಗು ಕೇಳಿ ಬಂದಿದೆ. ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿ ಬಂದಲ್ಲಿ ಬೆಲೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಸರ್ಕಾರ ವಿಧಿಸುವ ಬೇರೆ ಬೇರೆ ತೆರಿಗೆ ಬದಲು ಪೆಟ್ರೋಲ್-ಡಿಸೇಲ್ ಗೂ ಒಂದೇ ತೆರಿಗೆ ನಿಯಮ ಅನ್ವಯವಾಗುವುದ್ರಿಂದ ಬೆಲೆ ಇಳಿಯಲಿದೆ.

ಜುಲೈ ಒಂದರಂದು ಜಿಎಸ್ಟಿ ಜಾರಿಗೆ ಬಂದು ಒಂದು ವರ್ಷವಾಗಲಿದೆ. ವರ್ಷಕ್ಕೂ ಮುನ್ನವೇ ಸರ್ಕಾರ ಪೆಟ್ರೋಲ್-ಡಿಸೇಲ್ ಉತ್ಪನ್ನವನ್ನು ಜಿಎಸ್ಟಿಗೆ ಸೇರಿಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿಯಲ್ಲಿ ಬಂದ್ರೆ ಸುಮಾರು 30 ರೂಪಾಯಿಯಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

ಸದ್ಯ ವಾಹನ ಸವಾರರು ಪೆಟ್ರೋಲ್ ಗೆ ಶೇಕಡಾ 55.5 ಹಾಗೂ ಡಿಸೇಲ್ ಗೆ 47.3ರಷ್ಟು ತೆರಿಗೆ ನೀಡುತ್ತಾರೆ. ಇದ್ರಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರದ ತೆರಿಗೆ ಸುಂಕ ಹಾಗೂ ರಾಜ್ಯ ಸರ್ಕಾರಗಳ ವ್ಯಾಟ್ ಸೇರಿದೆ. ತಜ್ಞರ ಪ್ರಕಾರ ಪೆಟ್ರೋಲ್ ಮೇಲೆ ಶೇಕಡಾ 18ರಷ್ಟು ಜಿಎಸ್ಟಿ ಜಾರಿಗೆ ಬಂದ್ರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 45.75 ರೂಪಾಯಿಯಾಗಲಿದೆ. ಆದ್ರೆ ಇದಕ್ಕೆ ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಮಹತ್ವದ ಹೆಜ್ಜೆಯಿಡಬೇಕಾಗುತ್ತದೆ. ಒಂದು ವೇಳೆ ಪೆಟ್ರೋಲ್ ಗೆ ಶೇಕಡಾ 28ರಷ್ಟು ಜಿಎಸ್ಟಿ ವಿಧಿಸಿದ್ರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 55 ರೂಪಾಯಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...