alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ವರನ ಕೇಶಮುಂಡನ ಮಾಡಿದ್ರು ವಧು ಕಡೆಯವರು

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ವರನನ್ನು ಕಟ್ಟಿ ಹಾಕಿದ ವಧು ಕಡೆಯವರು ವರನ ಕೇಶಮುಂಡನ ಮಾಡಿದ್ದಾರೆ. ಇದಕ್ಕೆ ವರದಕ್ಷಿಣೆ ಬೇಡಿಕೆ ಕಾರಣ ಎನ್ನಲಾಗಿದೆ.

ಲಕ್ನೋದ ಇಂದಿರಾನಗರದಲ್ಲಿ ಘಟನೆ ನಡೆದಿದೆ. ವರನ ಕಡೆಯವರು ಅಚಾನಕ್ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರಂತೆ. ವರದಕ್ಷಿಣೆ ನೀಡದೆ ಹೋದಲ್ಲಿ ಮದುವೆ ರದ್ದು ಮಾಡುವುದಾಗಿ ಬೆದರಿಕೆಯೊಡ್ಡಿದ್ದರಂತೆ. ಇದ್ರಿಂದ ಕೋಪಗೊಂಡ ವಧು ಕಡೆಯವರು ಗಲಾಟೆ ಶುರು ಮಾಡಿದ್ದಾರೆ. ಎರಡೂ ಕಡೆಯವರ ಮಧ್ಯೆ ಮಾರಾಮಾರಿ ನಡೆದಿದೆ.

ವರ, ಬೈಕ್ ಹಾಗೂ ಬಂಗಾರದ ಚೈನ್ ಗೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಮದುವೆಗೆ 5 ದಿನವಿರುವಾಗ ವರದಕ್ಷಿಣೆ ಬೇಡಿಕೆ ಇಟ್ಟಿದ್ದನಲ್ಲದೆ ಮದುವೆ ಮುರಿಯುವುದಾಗಿ ಬೆದರಿಸಿದ್ದ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕೇಶಮುಂಡನ ಮಾಡಿದವರು ಯಾರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...