alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಮನೆಯಲ್ಲಿ ವರನ ಸ್ನೇಹಿತನಿಂದಲೇ ಕಳ್ಳತನ

theft

ಚೆನ್ನೈ: ಸ್ನೇಹಿತನ ಮದುವೆ ಸಮಾರಂಭಕ್ಕೆ ಹೋದವನೊಬ್ಬ ಪೊಗದಸ್ತಾಗಿ ಉಂಡಿದ್ದಲ್ಲದೇ ನವ ವಧು- ವರರಿಗೆ ಉಡುಗೊರೆಯಾಗಿ ಬಂದಿದ್ದ ಹಣ ಹಾಗೂ ಆಭರಣಗಳನ್ನು ಕದ್ದ ಘಟನೆ ಚೆನ್ನೈನಲ್ಲಿ ನಡೆದಿದೆ.

ಕೋಯಂಬೇಡುವಿನ ಕಲ್ಯಾಣ ಮಂದಿರದಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ವರನ ಸ್ನೇಹಿತ 27 ವರ್ಷದ ಕಾರ್ತಿಕ್ ಆಗಮಿಸಿದ್ದ. ಮದುವೆ ಮುಗಿದ ಬಳಿಕ ಭೋಜನ ಮುಗಿಸಿ ವಧು- ವರರನ್ನು ಅಭಿನಂದಿಸಲು ಈತ ವೇದಿಕೆ ಮೇಲೆ ಹೋಗಿದ್ದ.

ಈ ಸಂದರ್ಭದಲ್ಲಿ ಉಡುಗೊರೆಯಾಗಿ ಬಂದಿದ್ದ 10 ಸಾವಿರ ರೂ. ನಗದು ಹಾಗೂ ಬಂಗಾರದ ಆಭರಣವನ್ನು ಅಪಹರಿಸಿದ್ದ. ಹಣ ಹಾಗೂ ಆಭರಣ ಕಾಣೆಯಾದ ಹಿನ್ನಲೆಯಲ್ಲಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಕಾರ್ತಿಕ್ ಕದ್ದಿರುವುದು ಕಂಡು ಬಂದಿದೆ. ಈ ಸಂಬಂಧ ಚೋಳಮೇಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...