alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಟಪದಲ್ಲಿ ನೋಟು ಎಣಿಸದ ವರ: ಪತಿ ಜೊತೆ ಮನೆಗೆ ಹೋಗಲು ನಿರಾಕರಿಸಿದ್ಲು ವಧು

ಉತ್ತರಾಖಂಡದ ಜೈನ್ಪುರದ ಪರನಾಪತ್ತಿಯ ಮನೆಯೊಂದರಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಸಪ್ತಪದಿ ತುಳಿದು ಮದುವೆ ಸಂಪ್ರದಾಯವೆಲ್ಲ ಮುಗಿದಿತ್ತು. ಇನ್ನೇನು ದಿಬ್ಬಣ ವರನ ಮನೆಗೆ ಹೋಗಬೇಕು ಆಗ ನಡೆದ ಘಟನೆಯೊಂದು ಮದುವೆ ಮನೆ ಗಲಾಟೆ ಮನೆಯಾಗಲು ಕಾರಣವಾಯ್ತು.

ಮದುವೆ ನಂತ್ರ ವಧು ಕಡೆಯವರು ವರನಿಗೆ ಹಣ ಲೆಕ್ಕ ಹಾಕುವಂತೆ ಹೇಳಿದ್ದಾರೆ. ಆದ್ರೆ ವರ ಹಣ ಲೆಕ್ಕ ಹಾಕಲು ವಿಫಲನಾಗಿದ್ದಾನೆ. ವರ ಅನಕ್ಷರಸ್ಥ ಹಾಗೂ ಪೆದ್ದ ಎಂಬುದು ಗೊತ್ತಾಗಿದೆ. ಈ ಸಂಗತಿ ತಿಳಿದ ವಧು, ವರನ ಜೊತೆ ಹೋಗಲು ನಿರಾಕರಿಸಿದ್ದಾಳೆ.

ಈ ವಿಷ್ಯ ಹುಡುಗಿ ಮನೆಯವರಿಗೆ ತಿಳಿಯುತ್ತಿದ್ದಂತೆ ಅವ್ರು ಕೋಪಗೊಂಡಿದ್ದಾರೆ. ವರ ಹಾಗೂ ಆತನ ಕುಟುಂಬಸ್ಥರನ್ನು ಕಟ್ಟಿಹಾಕಿ ವರದಕ್ಷಿಣೆ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ರಾತ್ರಿಯಿಡೀ ಪಂಚಾಯತಿ ನಡೆದಿದೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹುಡುಗನ ಕಡೆಯವರು ಬರಿಗೈನಲ್ಲಿ ಮನೆ ಸೇರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...