alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮದುವೆ ಮುರಿದು ಬಿದ್ದ ಕಾರಣ ಕೇಳಿದ್ರೆ ಶಾಕ್ ಆಗ್ತೀರಿ !

marriage 49234ಮದುವೆಯೊಂದು ನೆರವೇರಿದ 48 ಗಂಟೆಗಳಲ್ಲೇ ಮುರಿದು ಬಿದ್ದಿದೆ. ಪ್ರಥಮ ರಾತ್ರಿ ಬಳಿಕ ಮದುಮಗ, ನವ ವಧುವನ್ನು ತೊರೆಯಲು ಮುಂದಾಗಿದ್ದಾನೆ. ಅದಕ್ಕೆ ಕಾರಣವಾಗಿದ್ದದಾದರೂ ಏನು ಎಂಬುದನ್ನು ಕೇಳಿದರೆ ನೀವು ಶಾಕ್ ಆಗ್ತೀರಿ.

ಮಹಾರಾಷ್ಟ್ರದ ನಾಸಿಕ್ ನಲ್ಲಿ ಈ ಘಟನೆ ನಡೆದಿದ್ದು, ಮೇ 22 ರಂದು ಈ ವಿವಾಹ ಬಂಧು- ಬಳಗದವರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಪ್ರಥಮ ರಾತ್ರಿಯಂದು ಸಮುದಾಯದ ಮುಖಂಡರನ್ನೊಳಗೊಂಡ ಪಂಚಾಯಿತಿಯವರು ಬಿಳಿ ಬಣ್ಣದ ಹೊದಿಕೆಯನ್ನು ಹಾಸಿಗೆ ಮೇಲೆ ಹಾಸಲು ನೀಡಿದ್ದರು.

ಮಾರನೇ ದಿನ ಆ ಹೊದಿಕೆ ತರಿಸಿಕೊಂಡ ಪಂಚಾಯಿತಿ ಮುಖಂಡರಿಗೆ ಅದರ ಮೇಲೆ ರಕ್ತದ ಕಲೆ ಕಂಡಿಲ್ಲ. ಅಷ್ಟಕ್ಕೇ ವಧು ಈ ಮೊದಲೇ ಕನ್ಯತ್ವ ಕಳೆದುಕೊಂಡಿದ್ದಾಳೆಂಬ ತೀರ್ಮಾನಕ್ಕೆ ಬಂದ ಪಂಚಾಯಿತಿಯವರು, ಮದುವೆ ಮುರಿದುಕೊಳ್ಳುವಂತೆ ವರನಿಗೆ ಸೂಚಿಸಿದ್ದಾರೆ. ಇದೀಗ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರುವ ಹಂತಕ್ಕೆ ಬಂದು ನಿಂತಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...