alex Certify
ಕನ್ನಡ ದುನಿಯಾ       Mobile App
       

Kannada Duniya

ಭಾವೀ ಪತ್ನಿ ವಿರುದ್ಧ ಪತ್ತೇದಾರಿಕೆ ಮಾಡಲು ಹೋಗಿ ಬೇಸ್ತು ಬಿದ್ದ ವರ

ವಿಜಯವಾಡ: ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ ವಧುವಿನ ವಿರುದ್ಧ ಪತ್ತೇದಾರಿ ನಡೆಸಲು ಮುಂದಾಗಿದ್ದರಿಂದ ವರನ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕೃಷ್ಣಾ ಜಿಲ್ಲೆಯ ರೋಯೂರು ಗ್ರಾಮದ ಮೆರುಗಾ ನಾಗಾರ್ಜುನ ಎಂಬುವವರ ಪುತ್ರಿ ದಿವ್ಯಾ ಹಾಗೂ ನಿಭಾನುಪುಡಿ ಗ್ರಾಮದ ಅರಿಸೆ ರಾಮರಾಂ ಅವರ ಪುತ್ರ ನಾಗಾ ಶ್ರೀನುಗೆ ಇದೇ ತಿಂಗಳ ಒಂದನೇ ತಾರೀಖಿಗೆ ವಿವಾಹವಾಗಬೇಕಿತ್ತು.

ಆದರೆ ದಿವ್ಯಾ ಒಂದು ರಾತ್ರಿ ಕರೆ ಸ್ವೀಕರಿಸಿಲ್ಲ ಎನ್ನುವ ಕಾರಣಕ್ಕೆ ಆಕೆಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ, ಆಕೆಯ ಮೊಬೈಲ್ ಗೆ ಚಲನವಲನ ಅರಿಯಲು ಆ್ಯಪ್ ಹಾಕಲು ಮುಂದಾಗಿದ್ದ. ಈ ಕಾರಣಕ್ಕೆ ಮದುವೆಗೆ ಒಂದು ದಿನವಿರುವಾಗ ಸಂಬಂಧ ಮುರಿದುಬಿದ್ದಿದೆ. ತನ್ನ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಶ್ರೀನು ವಿರುದ್ಧ ತಿರುಗಿಬಿದ್ದಿರುವ ದಿವ್ಯಾ, ತೊಟ್ಲಾವಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ವಿಜಯವಾಡದ ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರ ನಿಶ್ಚಿತಾರ್ಥ ಜೂ.22 ರಂದು ನಡೆದಿದೆ. ಬಳಿಕ ಫೋನ್ ನಲ್ಲಿ ಮಾತನಾಡಿಕೊಂಡು ಚೆನ್ನಾಗಿದ್ದರು. ಆದರೆ ಒಂದು ರಾತ್ರಿ ದಿವ್ಯಾ, ಶ್ರೀನುವಿನ ಕರೆ ಸ್ವೀಕರಿಸದಿರುವುದು ಇಷ್ಟೆಲ್ಲ ವಿವಾದಕ್ಕೆ ಕಾರಣವಾಗಿದೆ.

ಆಪ್ ಅಳವಡಿಸಲು ದಿವ್ಯಾಳ ಮೊಬೈಲ್ ನ್ನು ತನಗೆ ನೀಡುವಂತೆ ಶ್ರೀನು ಆಗ್ರಹಿಸಿದ್ದಾನೆ. ಆದರೆ ಇದಕ್ಕೆ ಒಪ್ಪದಿದ್ದಾಗ ಮದುವೆ ಮುರಿಯುವ ಹಂತಕ್ಕೆ ಜಗಳ ತಲುಪಿದೆ. ಕುಟುಂಬಸ್ಥರು ಮದುವೆ ನಡೆಸಲು ಎಷ್ಟೇ ಪ್ರಯತ್ನಪಟ್ಟರು ಪ್ರಯೋಜನವಾಗಿಲ್ಲ ಎನ್ನುವ ಮಾತುಗಳನ್ನು ಕುಟುಂಬಸ್ಥರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...