alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರ ಪಾಲಾಯ್ತು ದಿಬ್ಬಣಕ್ಕೆ ತೆರಳಬೇಕಿದ್ದ ವರನ ಕಾರು

ದೆಹಲಿಯಲ್ಲಿ ಮದುವೆ ದಿಬ್ಬಣ ಹೊರಡುವ ಕೆಲವೇ ಕ್ಷಣಗಳ ಮೊದಲು ವರನ ಕಾರು ಕಳವಾಗಿದೆ. ಗುರುವಾರ ಮದುವೆ ನಿಗದಿಯಾಗಿತ್ತು, ದಿಬ್ಬಣ ಹೊರಡಲು ಕಾರೇ ಇರಲಿಲ್ಲ, ಬಳಿಕ ಅನಿವಾರ್ಯವಾಗಿ ವರನ ಕಡೆಯವರು ಕ್ಯಾಬ್ ಮಾಡಿಕೊಂಡು ಹೊರಟಿದ್ದಾರೆ.

ವರನ ಮನೆಯಲ್ಲೇ ನಿಲ್ಲಿಸಿದ್ದ ಮಹೇಂದ್ರ ಬುಲೆರೊ ವಾಹನವನ್ನು ಯಾರೋ ಹೊತ್ತೊಯ್ದಿದ್ದಾರೆ. ಇದುವರೆಗೂ ಕಾರು ಕಳ್ಳರ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ.

ರಾಹುಲ್ ಜೈನ್ ಎಂಬ 26ರ ಯುವಕ ಮದುವೆಯ ಸಂಭ್ರಮದಲ್ಲಿದ್ದ. ಆದ್ರೆ ಕೊನೆ ಕ್ಷಣದಲ್ಲಿ ಕಾರು ಕಳ್ಳರ ಪಾಲಾಗಿದ್ದು ಮದುವೆ ಖುಷಿಯನ್ನೇ ನುಂಗಿಹಾಕಿತ್ತು. ಮದುವೆಗೆ ಬಂದ ಅತಿಥಿಗಳೆಲ್ಲ ಕಳ್ಳತನದ ಬಗ್ಗೆ ಪ್ರಶ್ನಿಸ್ತಾ ಇದ್ದಿದ್ರಿಂದ ಮತ್ತಷ್ಟು ಚಿಂತೆಗೊಳಗಾದೆ ಅಂತಾ ರಾಹುಲ್ ತಿಳಿಸಿದ್ದಾನೆ.

ಮದುವೆ ದಿಬ್ಬಣ ತುಘಲಕಾಬಾದ್ ನಿಂದ ಗಾಜಿಯಾಬಾದ್ ಗೆ ತೆರಳಬೇಕಿತ್ತು. ದಿಬ್ಬಣಕ್ಕೆ ಅಂತಾನೇ ಮರೂನ್ ಬಣ್ಣದ ಬೊಲೆರೋ ವಾಹನವನ್ನು ಮಧ್ಯಪ್ರದೇಶದಿಂದ ತಂದಿದ್ದರು.  ವಾಹನವನ್ನು ಕ್ಲೀನಾಗಿ ತೊಳೆದು ಮನೆಯಿಂದ ಅನತಿ ದೂರದಲ್ಲಿ ನಿಲ್ಲಿಸಲಾಗಿತ್ತು.

ಮಧ್ಯಾಹ್ನ 3.30ಕ್ಕೆ ಹೊರಡಬೇಕಾಗಿದ್ದರಿಂದ 2 ಗಂಟೆ ಸುಮಾರಿಗೆ ಕಾರಿಗೆ ಅಲಂಕಾರ ಮಾಡಲು ತೆರಳಿದ್ದಾರೆ. ಹೂವುಗಳಿಂದ ಸಿಂಗರಿಸಿಟ್ಟಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವರ ರಾಹುಲ್ ಸಿದ್ಧನಾಗಿ ಕಾರು ಏರಲು ಬಂದಿದ್ದ. ಆದ್ರೆ ಅಲ್ಲಿದ್ದ ಬೊಲೆರೋ ನಾಪತ್ತೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...