alex Certify
ಕನ್ನಡ ದುನಿಯಾ       Mobile App
       

Kannada Duniya

ಅಳಿಯನಿಗೆ ಸಂಕಷ್ಟ ತಂದೊಡ್ಡಿದೆ ಮಾವನಿಂದ ಪಡೆದ ಗಿಫ್ಟ್

ಮಾವನೊಬ್ಬ ಮಗಳ ವಿವಾಹ ಸಂದರ್ಭದಲ್ಲಿ ಅಳಿಯನಿಗೆ ಕೊಟ್ಟ ಗಿಫ್ಟ್ ಈಗ ಸಂಕಷ್ಟ ತಂದೊಡ್ಡಿದೆ. ಮಾವ ಕಾಳಜಿಪೂರ್ವಕವಾಗಿ ಕೊಟ್ಟ ಈ ಉಡುಗೊರೆ ಕಾರಣಕ್ಕಾಗಿ ಅಳಿಯ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತದೊಂದು ಘಟನೆ ಹರಿಯಾಣದ ಫತೇಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಅಲ್ಲಿನ ಪ್ರತಿಷ್ಟಿತ ಉದ್ಯಮಿ 26 ವರ್ಷದ ಸಂಜಯ್ ಪೂನಿಯಾರ ವಿವಾಹ ಜಿಂದ್ ಜಿಲ್ಲೆಯ ಚಾಂದ್ ರಾಮ್ ರ ಪುತ್ರಿ ರೀತು ಜೊತೆ ಫೆಬ್ರವರಿ 11 ರಂದು ನೆರವೇರಿತ್ತು.

ಅಳಿಯನ ಕುಟುಂಬ ಸಾಕಷ್ಟು ಜಮೀನು ಹೊಂದಿದ್ದರ ಅರಿವಿದ್ದ ಚಾಂದ್ ರಾಮ್, ಆ ಜಮೀನಿನಲ್ಲಿ ಕೋತಿಗಳ ಹಾವಳಿ ಜಾಸ್ತಿ ಎಂಬುದರ ಮಾಹಿತಿ ಪಡೆದಿದ್ದರು. ಅಳಿಯನಿಗೆ ಸ್ಪೆಷಲ್ ಗಿಫ್ಟ್ ಕೊಡಲು ಯೋಚಿಸಿದ್ದ ಚಾಂದ್ ರಾಮ್, ಅವರ ಜಮೀನಿನ ಕೋತಿಗಳನ್ನು ಓಡಿಸುವ ಸಲುವಾಗಿ ತರಬೇತಿ ಪಡೆದಿದ್ದ ಮತ್ತೊಂದು ಕೋತಿಯನ್ನು ಗಿಫ್ಟ್ ಆಗಿ ನೀಡಿದ್ದರು.

ಈ ವಿಚಾರ ಮಾಧ್ಯಮಗಳಲ್ಲಿ ವರದಿ ಆಗುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸಂರಕ್ಷಿತ ಪ್ರಾಣಿಯನ್ನು ಮಾರಾಟ ಮಾಡುವುದು, ಹೊಂದುವುದು ಅರಣ್ಯ ಸಂರಕ್ಷಣಾ ಕಾಯ್ದೆಯನ್ವಯ ಅಪರಾಧವಾಗಿದ್ದು, ಶುಕ್ರವಾರದಂದು ಸಂಜಯ್ ಪೂನಿಯಾ ಮನೆ ಮೇಲೆ ದಾಳಿ ಮಾಡಿ ಕೋತಿಯನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ ಆತನ ವಿರುದ್ದ ಪ್ರಕರಣ ಕೂಡಾ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...