alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ವರನ ಟಪ್ಪಾಂಗುಚ್ಚಿ ಡ್ಯಾನ್ಸ್ ವಿಡಿಯೋ

groom-dancing_650x400_81488267021

ಮದುವೆಯಲ್ಲಿ ವಧು ಡ್ಯಾನ್ಸ್ ಮಾಡಿರೋ ವಿಡಿಯೋ ಆಗಾಗ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿರುತ್ತೆ. ಆದ್ರೀಗ ವಿವಾಹ ವೇದಿಕೆಯಲ್ಲೇ ಸ್ನೇಹಿತರ ಜೊತೆ ವರ ಕೂಡ ಟಪ್ಪಾಂಗುಚ್ಚಿ ಡ್ಯಾನ್ಸ್ ಮಾಡಿರೋ ವಿಡಿಯೋ ಒಂದು ಹರಿದಾಡ್ತಾ ಇದೆ.

ಈ ವಿಡಿಯೋ ಫೇಸ್ಬುಕ್ ನಲ್ಲಿ ಪೋಸ್ಟ್ ಆಗಿ ಎರಡೇ ದಿನಗಳಲ್ಲಿ 3.6 ಮಿಲಿಯನ್ ಗೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ, 50,000ಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ಸುಮಾರು 2 ನಿಮಿಷಗಳ ಈ ವಿಡಿಯೋದಲ್ಲಿ ವರ ತನ್ನ ಸ್ನೇಹಿತರ ಜೊತೆ ಬಿಂದಾಸ್ ಆಗಿ ನೃತ್ಯ ಮಾಡಿದ್ದಾನೆ.

ಬೂದು ಬಣ್ಣದ ಸೂಟ್, ಕತ್ತಿನಲ್ಲಿ ವರಮಾಲೆ ಹಾಕಿಕೊಂಡು ಮಿಂಚ್ತಾ ಇರೋ ಮದುಮಗ ಪಕ್ಕದಲ್ಲೇ ಇದ್ದ ವಧುವಿನ ಕಡೆಗೂ ಗಮನ ಕೊಟ್ಟಿಲ್ಲ. ಮದುವೆಗೆ ಬಂದಿರೋ ನೆಂಟರಿಷ್ಟರೆಲ್ಲ ಏನಂದುಕೊಳ್ತಾರೋ ಅಂತೆಲ್ಲಾ ಯೋಚಿಸಿಲ್ಲ. ತನ್ನ ಆತ್ಮೀಯ ಗೆಳೆಯರ ಜೊತೆಗೆ ಅದ್ಭುತವಾಗಿ ನರ್ತಿಸಿದ್ದಾನೆ. ಹೀಗೆ ಸ್ಟೆಪ್ ಹಾಕ್ತಾ ಹಾಕ್ತಾ ಕೊನೆಗೆ ವಧುವಿನ ಪಕ್ಕದಲ್ಲಿ ಹೋಗಿ ನಿಂತುಕೊಂಡಿದ್ದಾನೆ. ಈ ವಿಡಿಯೋಗೆ ಅದ್ಭುತವಾದ ಕಮೆಂಟ್ ಗಳು ಕೂಡ ಬಂದಿವೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...