alex Certify
ಕನ್ನಡ ದುನಿಯಾ       Mobile App
       

Kannada Duniya

ಮಾದರಿಯಾಯ್ತು ಅಪಘಾತದ ನಂತ್ರ ವಧು ಕೈಗೊಂಡ ನಿರ್ಧಾರ

ಮಧ್ಯಪ್ರದೇಶದ ಪ್ರಭಾತಪಟ್ಟಣದಲ್ಲಿ ಅನನ್ಯ ಮದುವೆಯೊಂದು ನಡೆದಿದೆ. ಮದುವೆಗೂ ಮುನ್ನ ರಸ್ತೆ ಅಪಘಾತಕ್ಕೊಳಗಾದ ವರ ಮದುವೆ ನಿಲ್ಲಿಸುವಂತೆ ವಧುವಿಗೆ ಹೇಳಿದ್ದಾನೆ. ಆದ್ರೆ ವಧು ಮಾತ್ರ ವರನ ಕೈ ಹಿಡಿಯುವ ಜೊತೆಗೆ ವರ ಕುಳಿತಿದ್ದ ವೀಲ್ ಚೇರ್ ಕೈನಲ್ಲಿ ಹಿಡಿದು ಸದಾ ನಿನ್ನೊಂದಿಗೆ ನಾನಿರುತ್ತೇನೆಂಬ ಭರವಸೆ ನೀಡಿದ್ದಾಳೆ.

ವಿಕಾಸ್ ಮದುವೆ ಫೆಬ್ರವರಿ 25ರಂದು ನಿಶ್ಚಿತವಾಗಿತ್ತು. ಆದ್ರೆ 15 ದಿನ ಮೊದಲು ವಿಕಾಸ್ ರಸ್ತೆ ಅಪಘಾತಕ್ಕೊಳಗಾಗಿದ್ದ. ಈ ಅಪಘಾತ ವಿಕಾಸ್ ವೀಲ್ ಚೇರ್ ಏರುವಂತೆ ಮಾಡಿತ್ತು. ಇದ್ರಿಂದ ಆಘಾತಕ್ಕೊಳಗಾಗಿದ್ದ ವಿಕಾಸ್, ವಧು ಕೀರ್ತಿಗೆ ಬೇರೆ ಮದುವೆಯಾಗುವಂತೆ ಸಲಹೆ ನೀಡಿದ್ದ.

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕೀರ್ತಿ, ವಿಕಾಸ್ ಗೆ ಆಶ್ಚರ್ಯ ಹುಟ್ಟಿಸುವ ಕೆಲಸ ಮಾಡಿದ್ದಾಳೆ. ವಿಕಾಸ್ ಕೈ ಹಿಡಿಯುವ ಮಹತ್ವದ ನಿರ್ಧಾರ ಕೈಗೊಂಡು ಮಾದರಿಯಾಗಿದ್ದಾಳೆ. ಆಕೆ ನಿರ್ಧಾರ ಮೊದಲು ಕುಟುಂಬಸ್ಥರಿಗೆ ಆಘಾತವುಂಟು ಮಾಡಿತ್ತು. ನಂತ್ರ ಮಗಳ ನಿರ್ಧಾರಕ್ಕೆ ಕುಟುಂಬಸ್ಥರು ಭೇಷ್ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...