alex Certify
ಕನ್ನಡ ದುನಿಯಾ       Mobile App
       

Kannada Duniya

ಶೂ ಕಳ್ಳತನವಾಗಿದ್ದಕ್ಕೆ ಕೋಪಗೊಂಡ ವರ ಮಾಡ್ದ ಇಂಥ ಕೆಲಸ

ಮದುವೆ ಶೂ ಕಳ್ಳತನ ಮಾಡಿದ್ದಾನೆಂಬ ಶಂಕೆ ಮೇರೆಗೆ ವ್ಯಕ್ತಿಯೊಬ್ಬನನ್ನು ವರ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ಘಟನೆ ಉತ್ತರ ಪ್ರದೇಶದ ಬದಾಯು ಜಿಲ್ಲೆಯ ಬಿಲ್ಸಿಯಲ್ಲಿ ನಡೆದಿದೆ. ಹಲ್ಲೆ ನಂತ್ರ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಶನಿವಾರ ರಾತ್ರಿ ಸಾವನ್ನಪ್ಪಿದ್ದಾನೆ.

ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತನ ಪತ್ನಿ ಹೇಳಿಕೆ ಮೇಲೆ ವರ ಹಾಗೂ ಆತನ ನಾಲ್ವರು ಸ್ನೇಹಿತರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಶುರುಮಾಡಿದ್ದಾರೆ.

ವರ ಸುರೇಂದ್ರ ಮದುವೆ ಮನೆ ಹೊರಗೆ ಶೂ ಬಿಟ್ಟು ಹೋಗಿದ್ದ. ಮದುವೆ ಕಾರ್ಯಕ್ರಮ ಮುಗಿಸಿ ಹೊರ ಬಂದಾಗ ಶೂ ಕಾಣೆಯಾಗಿತ್ತು. ಇದ್ರಿಂದ ಕೋಪಗೊಂಡ ಸುರೇಂದ್ರ ಕೂಗಾಡಲು ಶುರುಮಾಡಿದ್ದಾನೆ. ಆತನ ಸ್ನೇಹಿತರೂ ಸುರೇಂದ್ರನಿಗೆ ಬೆಂಬಲ ನೀಡಿದ್ದಾರೆ. ಅಲ್ಲಿಯೇ ನಿಂತಿದ್ದ ರಾಮ್ಸರಣ್ ಮೇಲೆ ಸಂಶಯ ವ್ಯಕ್ತಪಡಿಸಿ ಹಲ್ಲೆ ಶುರುಮಾಡಿದ್ದಾರೆ.

ರಾಮ್ಸರಣ್ ಶೂ ಕದ್ದಿಲ್ಲವೆಂದು ಎಷ್ಟು ಹೇಳಿದ್ರೂ ಕೇಳದ ಸ್ನೇಹಿತರು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಮ್ಸರಣ್ ನನ್ನು ಸಂಬಂಧಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲ ನೀಡಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...