alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ದಿನವೇ ಕೊಲೆಗಾರನಾದ ವರ..!

groom-accidentally-kills-10-year-old-boy-at-weddingಹೊಸ ಬದುಕಿಗೆ ಕಾಲಿಡುವ ಕನಸು ಕಾಣುತ್ತಿದ್ದ ವರನೊಬ್ಬ ಸಂಪ್ರದಾಯದ ಆಚರಣೆ ವೇಳೆ ಎಡವಿದ ಕಾರಣಕ್ಕೆ ಇದೀಗ ಕೊಲೆಗಾರನ ಪಟ್ಟ ಹೊತ್ತಿದ್ದಾನೆ. ಇಂತದೊಂದು ವಿಚಿತ್ರ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ನಡೆದಿದೆ.

ನೀಮುಚ್ ಜಿಲ್ಲೆಯ ರಾಮಪುರ್ ಗ್ರಾಮದಲ್ಲಿ ಈ ವಿವಾಹ ಸಮಾರಂಭ ನಡೆಯುತ್ತಿದ್ದ ವೇಳೆ ಬಂಧು-ಬಾಂಧವರು ಸಂಭ್ರಮದಿಂದ ಇದರಲ್ಲಿ ಪಾಲ್ಗೊಂಡಿದ್ದರು. ಸಂಪ್ರದಾಯದಂತೆ ವರ, ಕತ್ತಿಯಿಂದ ಮರದ ಎಲೆಗಳನ್ನು ಕತ್ತರಿಸಬೇಕಿತ್ತು.

ಈ ವೇಳೆ ಆಕಸ್ಮಿಕವಾಗಿ ಕತ್ತಿ, ವಧುವಿನ ಸಹೋದರ ಸಂಬಂಧಿ 10 ವರ್ಷದ ಬಾಲಕನಿಗೆ ತಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಘಟನೆಯಿಂದ ತೀವ್ರವಾಗಿ ಘಾಸಿಗೊಂಡ ವಧುವಿನ ಕುಟುಂಬ ವಿವಾಹವನ್ನೇ ರದ್ದುಗೊಳಿಸಿದೆ. ವಿವಾಹ ಸಂಭ್ರಮದಲ್ಲಿರಬೇಕಿದ್ದ ವರ, ಈಗ ಕೊಲೆಗಾರನ ಪಟ್ಟ ಹೊತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಬಂಧನಕ್ಕೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...