alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಗೆ ಮರುಜೀವ ಕೊಟ್ಟ ಅಜ್ಜಿಯ ಕಿಡ್ನಿ

baby

ಅಜ್ನಿಯ ಕಿಡ್ನಿ ಕೊಚ್ಚಿಯಲ್ಲಿ 2 ವರ್ಷದ ಮಗುವಿಗೆ ಮರುಜೀವ ಕೊಟ್ಟಿದೆ. ಕೇವಲ 7 ಕೆಜಿ ತೂಕವಿದ್ದ 2 ವರ್ಷದ ಬಾಲಕಿ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ಲು. ಆಕೆಗೆ ಡ್ಯೂಯಲ್ ಲೈವ್ ಡೋನರ್ ಟ್ರಾನ್ಸ್ ಪ್ಲಾಂಟ್ ಮಾಡಲಾಗಿದೆ.

ಅಜ್ಜಿ ಮೂತ್ರಪಿಂಡವನ್ನು ಮಗುವಿಗೆ ಕೊಟ್ಟಿದ್ದಾರೆ. ತ್ರಿಶೂರ್ ಜಿಲ್ಲೆಯ ಕೋಡಕರದ ಬಾಲಕಿ ಪಾರ್ವತಿಗೆ primary hyperoxaluria-type 1 ತೊಂದರೆಯಿತ್ತು. ಯಕೃತ್ತು ಮತ್ತು ಕಿಣ್ವದ ಕೊರತೆಯಿಂದ ಕಿಡ್ನಿಗೆ ಶಾಶ್ವತವಾಗಿ ಹಾನಿಯಾಗುವ ಸಾಧ್ಯತೆಯಿತ್ತು.

4 ತಿಂಗಳ ಮಗುವಿದ್ದಾಗ ಪಾರ್ವತಿಗೆ ಪ್ರತಿದಿನ ಡಯಾಲಿಸಿಸ್ ಮಾಡಲಾಗುತ್ತಿತ್ತು. ದಿನದ 20 ಗಂಟೆಗಳ ಕಾಲ ಡಯಾಲಿಸಿಸ್ ಪ್ರಕ್ರಿಯೆ ನಡೆಯುತ್ತಿತ್ತು. ಒಂದು ವರ್ಷವಾದ್ಮೇಲೆ ಅವಳನ್ನು ವೆಂಟಿಲೇಟರ್ ನಲ್ಲಿಟ್ಟು ಹೆಮೋಡಯಾಲಿಸಿಸ್ ಮಾಡಲಾಗುತ್ತಿತ್ತು. ಆದ್ರೆ ಕಿಡ್ನಿ ಕಸಿ ಮಾಡದೆ ಬೇರೆ ವಿಧಿಯೇ ಇಲ್ಲ ಅಂತಾ ವೈದ್ಯರು ಹೇಳಿಬಿಟ್ಟಿದ್ರು. ಕೊನೆಗೆ ಹಾನಿಗೊಳಗಾಗಿದ್ದ ಪಾರ್ವತಿಯ ಬಲಭಾಗದ ಕಿಡ್ನಿಯನ್ನು ತೆಗೆದು ಅವಳ ಅಜ್ಜಿ ಸತಿ ರಾಘವನ್ ಅವರ ಕಿಡ್ನಿಯನ್ನು ಕಸಿ ಮಾಡಲಾಗಿದೆ. ಅಜ್ಜಿಯ ಕಿಡ್ನಿ ಪಡೆದ ಮಗುವೀಗ ಚೇತರಿಸಿಕೊಳ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...