alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿಯನ್ನು ಕರೆದುಕೊಂಡು ಬರುತ್ತೇನೆಂದು ಹೇಳಿದವನು ಮಾಡಿದ್ದೇನು ಗೊತ್ತಾ?

ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬ ತನ್ನ ಪರ ‘ಟೀಮ್ ಇಂಡಿಯಾ’ ನಾಯಕ ವಿರಾಟ್ ಕೊಹ್ಲಿ ಪ್ರಚಾರಕ್ಕೆ ಬರುತ್ತಾರೆಂದು ಹೇಳಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡು ಬಳಿಕ ಏನು ಮಾಡಿದ್ದಾನೆ ಗೊತ್ತಾ?

ಹೌದು, ಇಂತಹ ಘಟನೆಯೊಂದರ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಭಾರಿ ಚರ್ಚೆಗೆ ಕಾರಣವಾಗಿದೆ.

ಚುನಾವಣೆಗೆ ಸ್ಪರ್ಧಿಸಿದ್ದ ಈ ಅಭ್ಯರ್ಥಿ, ಪೋಸ್ಟರ್ಗಳಲ್ಲಿ ವಿರಾಟ್ ಕೊಹ್ಲಿ ಫೋಟೋ ಹಾಕಿದ್ದಲ್ಲದೆ ಜೊತೆಗೆ ಬ್ಯಾಟ್ ಹಾಗೂ ಬಾಲ್ ಇದ್ದ ಕಾರಣ ಸಾರ್ವಜನಿಕರು, ವಿರಾಟ್ ಕೊಹ್ಲಿ ಬರುತ್ತಾರೆಂದು ಕುತೂಹಲದಿಂದ ಕಾದಿದ್ದರು.

ಆದರೆ ಅಭ್ಯರ್ಥಿ, ವಿರಾಟ್ ಕೊಹ್ಲಿಯ ತದ್ರೂಪಿಯನ್ನು ಕರೆದುಕೊಂಡು ಬಂದಿದ್ದಾನೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತಾದರೂ ಬಳಿಕ ಕೊಹ್ಲಿ ತದ್ರೂಪಿಯನ್ನು ನೋಡಿ ಸಮಾಧಾನಪಟ್ಟುಕೊಂಡಿದ್ದಾರೆ.

ಆದರೆ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರಿಂದ ತರಹೇವಾರಿ ಕಾಮೆಂಟ್ಗಳು ಹರಿದುಬರುತ್ತಿವೆ. ಒಬ್ಬಾತ, ಸದ್ಯ ಅಭ್ಯರ್ಥಿಯೂ ತದ್ರೂಪಿ ಆಗಲಿಲ್ಲವಲ್ಲಾ ಎಂದರೆ ಮತ್ತೊಬ್ಬರು ಐಪಿಎಲ್ ಪರಾಭವದ ಬಳಿಕ ಕೊಹ್ಲಿ ಫ್ರೀ ಇರುವ ಕಾರಣ ಪ್ರಚಾರಕ್ಕೆ ಹೋಗಬಹುದಿತ್ತು ಎಂದು ಕುಟುಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...