alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಳಧನಿಕರನ್ನು ಸುಮ್ಮನೆ ಬಿಡಲ್ಲ ಎಂದ ಮೋದಿ

modi-ddf

ನವದೆಹಲಿ: ಕಾಳಧನಿಕರನ್ನು ನಮ್ಮ ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಲೆಕ್ಕಪತ್ರ ಪರಿಶೋಧಕರ ಸಂಸ್ಥೆಯ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

ಕಾಳಧನ ಕೂಡಿಟ್ಟವರಿಗೆ ಇನ್ನಷ್ಟು ಸಂಕಷ್ಟದ ದಿನಗಳು ಬರಲಿವೆ. ಕಾಳಧನಿಕರ ವಿರುದ್ಧ ಸಮರ ಸಾರಿದ್ದಕ್ಕೆ ಸ್ವಿಸ್ ಬ್ಯಾಂಕ್ ಗಳಿಗೆ ಹೋಗುತ್ತಿದ್ದ ಹಣದ ಹರಿವು ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದು ಸ್ವಿಸ್ ಬ್ಯಾಂಕ್ ಇತ್ತೀಚೆಗೆ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಕೊಳಕನ್ನು ಹೋಗಲಾಡಿಸಲು ಸ್ವಚ್ಛಭಾರತ್ ಯೋಜನೆ ಆರಂಭಿಸಿದಂತೆ, ಕಾಳಧನಿಕರನ್ನು ಬಗ್ಗುಬಡಿಯಲು ನೋಟ್ ಬ್ಯಾನ್ ಮಾಡಲಾಗಿದೆ. ನಕಲಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಿ.ಎಸ್.ಟಿ. ಉತ್ತಮ ಮತ್ತು ಸರಳವಾದ ತೆರಿಗೆ ಪದ್ಧತಿಯಾಗಿದ್ದು, ಆರ್ಥಿಕ ಬೆಳವಣಿಗೆಗೆ ಅನುಕೂಲವಾಗಲಿದೆ. ಲೆಕ್ಕಪರಿಶೋಧಕರು ಜಿ.ಎಸ್.ಟಿ. ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...