alex Certify
ಕನ್ನಡ ದುನಿಯಾ       Mobile App
       

Kannada Duniya

2018 ರಿಂದ ಮತ್ತೆ ಶುರುವಾಗಲಿದೆ 10ನೇ ತರಗತಿಗೆ ಬೋರ್ಡ್ ಪರೀಕ್ಷೆ

prakash-javadekar_tuy9jnn

2017-2018ನೇ ಸಾಲಿನಿಂದ ಸಿ ಬಿ ಎಸ್ ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಶುರುವಾಗಲಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಈ ವಿಷಯ ತಿಳಿಸಿದ್ದಾರೆ. ಗ್ರೇಡಿಂಗ್ ಪದ್ಧತಿಯನ್ನು ರದ್ದು ಮಾಡಿ ಬೋರ್ಡ್ ಪರೀಕ್ಷೆ ಆರಂಭಿಸುವ ಸೂಚನೆಯನ್ನು ಜಾವಡೇಕರ್ ನೀಡಿದ್ದಾರೆ.

ಐದು ಮತ್ತೆ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಲಾಗುವುದು. ಈ ಪ್ರಸ್ತಾವನೆಯನ್ನು ಮೊದಲು ಮಂತ್ರಿಮಂಡಲದ ಮುಂದಿಟ್ಟು ನಂತ್ರ ಸಂಸತ್ ನ ಒಪ್ಪಿಗೆ ಪಡೆಯುವುದಾಗಿ ಜಾವಡೇಕರ್ ಹೇಳಿದ್ದಾರೆ.

ಸರ್ಕಾರಿ ಶಾಲೆಗಳ ಪಠ್ಯಕ್ರಮದಲ್ಲಿ ಸುಧಾರಣೆ ತರುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ರಾಜಸ್ತಾನದಲ್ಲಿ ಶಾಲೆಗಳಿಗೆ ಬರುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. 25 ವರ್ಷಗಳ ಹಿಂದೆ ಶಿಕ್ಷಣದಲ್ಲಿ ಹಿಂದಿದ್ದ ರಾಜಸ್ತಾನದಲ್ಲಿ ಈಗ ಗುಣಮಟ್ಟದ ಶಿಕ್ಷಣ ನೀಡಲಾಗ್ತಾ ಇದೆ. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಮೋದಿ ಸರ್ಕಾರದ ಬಯಕೆಯಾಗಿದೆ ಎಂದು ಜಾವಡೇಕರ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...