alex Certify
ಕನ್ನಡ ದುನಿಯಾ       Mobile App
       

Kannada Duniya

ಸರಸದ ಸಂಭ್ರಮವನ್ನು ಹೆಚ್ಚಿಸಲಿದೆ ‘ನಿರೋಧ್’

nirodh

ಒಂದು ಕಾಲದಲ್ಲಿ ಗರ್ಭ ನಿರೋಧಕ ಸಾಧನಕ್ಕೆ ಪರ್ಯಾಯ ಪದ ಎನ್ನುವಂತೆ ಬಳಕೆಯಾಗುತ್ತಿದ್ದ ‘ನಿರೋಧ್’ ಕಾಲಕ್ರಮೇಣ ಕಡಿಮೆಯಾಗತೊಡಗಿತ್ತು. ಮಾರುಕಟ್ಟೆಯಲ್ಲಿ ನಾನಾ ಕಂಪನಿಯ ಆಕರ್ಷಕ ಗರ್ಭ ನಿರೋಧಕ ಸಾಧನ ಲಗ್ಗೆ ಇಟ್ಟಿದ್ದರಿಂದ ನಿರೋಧ್ ಗೆ ಬೇಡಿಕೆ ಕಡಿಮೆಯಾಗಿತ್ತು.

ಬಸ್, ರೈಲು ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ಸುರಕ್ಷಿತ ಲೈಂಗಿಕತೆಗಾಗಿ ನಿರೋಧ್ ಬಳಸಿ ಎಂಬ ಬಾಕ್ಸ್ ಗಳು ಕಾಣಸಿಗುತ್ತಿದ್ದವು. ಹಿಂದೆ ಆರೋಗ್ಯ ಇಲಾಖೆಯಿಂದ ಸುರಕ್ಷಿತ ಲೈಂಗಿಕತೆ ಮತ್ತು ಕುಟುಂಬ ಯೋಜನೆ ಭಾಗವಾಗಿ ನಿರೋಧ್ ಕುರಿತಂತೆ ಹೆಚ್ಚಿನ ಪ್ರಚಾರ ಮಾಡಲಾಗುತ್ತಿತ್ತು. ಆದರೆ, ಹೊಸ ಆಕರ್ಷಕ ಪ್ಯಾಕ್ ಗಳಲ್ಲಿ ಗರ್ಭ ನಿರೋಧಕ ಸಾಧನ(ಕಾಂಡೋಮ್)ಗಳು ಮಾರುಕಟ್ಟೆಗೆ ಬಂದ ಬಳಿಕ ಜನ ನಿರೋಧ್ ಅನ್ನು ಮರೆತೇ ಬಿಟ್ಟಿದ್ದರು.

ಇದೀಗ ಮತ್ತೆ ಆಕರ್ಷಕ ಪ್ಯಾಕ್ ಗಳಲ್ಲಿ ನಿರೋಧ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ದೇಶದಲ್ಲಿ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗರ್ಭ ನಿರೋಧಕ ಸಾಧನಗಳ ಕೊರತೆ ಇದ್ದು, ಹೊಸ ಆಕರ್ಷಕ ಪ್ಯಾಕ್ ಗಳಲ್ಲಿ ನಿರೋಧ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...