alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ವಿಮಾನ ನಿಲ್ದಾಣ ಎದುರಿಸುತ್ತಿದೆ ಇಂತದೊಂದು ಸಮಸ್ಯೆ

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ಕೆಲವೇ ದಿನಗಳಲ್ಲಿ ಭಾರೀ ಸಮಸ್ಯೆಯೊಂದನ್ನ ಎದುರಿಸೋಕೆ ಸಜ್ಜಾಗುತ್ತಿದೆ. ಹತ್ತು ವರ್ಷಗಳಿಂದ ಭದ್ರತಾ ಸಿಬ್ಬಂದಿಗೆ ಬಾಕಿ ಉಳಿಸಿಕೊಂಡಿರುವ ಭಾರಿ ಪ್ರಮಾಣದ ವೇತನ ಇನ್ನೂ ಸಿಗದ ಹಿನ್ನಲೆಯಲ್ಲಿ ಸರ್ಕಾರ ದೆಹಲಿ ವಿಮಾನ ನಿಲ್ದಾಣ ನಿಗಮದಿಂದ ಸಿಐಎಸ್ಎಫ್ ಯೋಧರ ಸೇವೆಯನ್ನು ನಿಲ್ಲಿಸುವ ಸಾಧ್ಯತೆ ಇದೆ.

ಸದ್ಯ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4000 ರಾಷ್ಟ್ರೀಯ ಔದ್ಯೋಗಿಕ ಭದ್ರತಾ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸುಮಾರು 600 ಕೋಟಿ ರೂಪಾಯಿಯಷ್ಟು ವೇತನ ಮತ್ತು ಭತ್ಯೆಯನ್ನ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಬಗ್ಗೆ ಜುಲೈ ಮೊದಲ ವಾರದಲ್ಲೇ ಕೇಂದ್ರ ಗೃಹ ಕಾರ್ಯದರ್ಶಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು ಭದ್ರತಾ ಸೇವೆಯನ್ನ ನಿಲ್ಲಿಸದೆ ಬೇರೆ ಆಯ್ಕೆ ಇಲ್ಲ ಅಂತ ತಿಳಿಸಿದ್ದಾರೆ.

ಪ್ರತಿ ವರ್ಷವೂ ಭದ್ರತಾ ಸಿಬ್ಬಂದಿಗೆ ದೆಹಲಿ ವಿಮಾನ ನಿಲ್ದಾಣ ನಿಗಮದಿಂದ ಸರಿಯಾಗಿ ವೇತನ ಪಾವತಿಯಾಗ್ತಿಲ್ಲ. ಸಂಪೂರ್ಣ ವೇತನವನ್ನ ಪಾವತಿಸದೆ ಕೇವಲ ಕಂತುಗಳಲ್ಲಿ ವೇತನವನ್ನು ನೀಡ್ತಿದ್ದಾರೆ. ಪಾರ್ಟಿಮೆಂಟರಿ ಫೋರ್ಸ್ಗಳಿಗೆ ಸಮನಾಗಿ ನೀಡುವಂತಾ ವೇತನ ನೀಡುತ್ತಿಲ್ಲ ಅಂತ ಸಿಬ್ಬಂದಿ ಆರೋಪಿಸಿದ್ದಾರೆ.
ಈ ಸಂಬಂಧ ದೆಹಲಿ ವಿಮಾನ ನಿಲ್ದಾಣ ನಿಗಮದ ಆಡಳಿತ ಮಂಡಳಿ ಮತ್ತು ಸರ್ಕಾರದ ನಡುವೆ ಹಲವು ಚರ್ಚೆಗಳು ನಡೆದಿವೆಯಾದ್ರು ಅದಕ್ಕೆ ಪರಿಹಾರ ಸಿಕ್ಕಿಲ್ಲ.

ವಿಮಾನ ನಿಲ್ದಾಣದ ಖರ್ಚು ವೆಚ್ಚಗಳು ಆದಾಯವನ್ನೂ ಮೀರಿದೆ. ಹಾಗಾಗಿ ಪ್ರಯಾಣಿಕರಿಂದ ಸಂಗ್ರಹಿಸುತ್ತಿರುವ ಭದ್ರತಾ ವೆಚ್ಚ ಕೂಡ ಆದಾಯ ಮತ್ತು ವೆಚ್ಚಕ್ಕೆ ಸರಿಹೊಂದುತ್ತಿಲ್ಲ. 2016-17ರಲ್ಲಿ ಪ್ರಯಾಣಿಕರಿಂದ ಸಂಗ್ರಹಿಸಲಾದ 336 ಕೋಟಿ ರುಪಾಯಿಯಲ್ಲಿ 204 ಕೋಟಿ ರೂಪಾಯಿಗಳನ್ನ ಭದ್ರತಾ ಸಿಬ್ಬಂದಿಯ ವೇತನದ ಬಾಕಿ ತೀರಿಸಲು ವಿನಿಯೋಗಿಸಲಾಗಿದೆಯಂತೆ. ಉಳಿದ ಹಣವನ್ನು ಸಾಲದ ಬಡ್ಡಿಗಾಗಿ ಬಳಸಲಾಗಿದೆಯಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...