alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶದಲ್ಲಿರುವ ಭಾರತೀಯರಿಗೆ ಮತ್ತೊಂದು ಶಾಕ್

old

ವಿದೇಶದಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ನೋಟು ನಿಷೇಧದ ನಂತರ ತವರಿಗೆ ಮರಳಲು ಸಾಧ್ಯವಾಗದ ಭಾರತೀಯರಿಗೆಲ್ಲ ಇದು ಬೇಸರದ ಸುದ್ದಿ. ನಿಷೇಧಿತ 500 ಮತ್ತು 1000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಎಲ್ಲರಿಗೂ ಹೆಚ್ಚುವರಿ ಅವಧಿ ಲಭ್ಯವಿಲ್ಲ.

ಎನ್ ಆರ್ ಐಗಳಿಗೆ ಮಾತ್ರ ಜೂನ್ 2017 ರವರೆಗೆ ಹಳೆ ನೋಟು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಅಂತಾ ಕೇಂದ್ರ ಸರ್ಕಾರ ಹೇಳಿದೆ. ಇದ್ರಿಂದ ವಿದೇಶದಲ್ಲಿರುವ ಭಾರತೀಯ ಮೂಲದವರು (PIO) ಮತ್ತು ಸಾಗರೋತ್ತರದಲ್ಲಿರುವ ಭಾರತೀಯ ನಾಗರಿಕರಿಗೆ (OCI) ನಿರಾಸೆಯಾಗಿದೆ.

ನೋಟು ನಿಷೇಧದ ಬಳಿಕ ಅಂದ್ರೆ ನವೆಂಬರ್ 8 ರಿಂದ ಡಿಸೆಂಬರ್ 31 ರವರೆಗೆ ಭಾರತಕ್ಕೆ ಮರಳಲು ಸಾಧ್ಯವಾಗದೇ ಇದ್ದವರು ಹೆಚ್ಚುವರಿ ಅವಧಿಯಲ್ಲಿ ನೋಟು ಬದಲಾವಣೆ ಮಾಡಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದ್ರೆ ಸರ್ಕಾರ ಅವರನ್ನು ಈ ಯೋಜನೆಯಿಂದ ಹೊರಗಿಟ್ಟಿದೆ. ನೋಟು ನಿಷೇಧದ ಸಮಯದಲ್ಲಿ ಸರ್ಕಾರ ಹಾಗೂ ಆರ್ ಬಿ ಐ ಮಾರ್ಚ್ 31ರ ವರೆಗೆ ನೋಟು ಬದಲಾವಣೆಗೆ ಅವಕಾಶ ನೀಡುವುದಾಗಿ ಹೇಳಿದ್ದವು. ಆದ್ರೆ ಡಿಸೆಂಬರ್ 31 ರ ನಂತರ ಆರ್ ಬಿ ಐನಲ್ಲಿ ಜನಸಾಮಾನ್ಯರಿಗೆ ನೋಟು ಬದಲಾವಣೆಗೆ ಸರ್ಕಾರ ಅವಕಾಶ ನಿರಾಕರಿಸಿದೆ.

ಇದೀಗ PIO ಹಾಗೂ OCI ಗಳಿಗೆ ಹಳೆ ನೋಟು ಬದಲಾವಣೆಗೆ ಮಾರ್ಚ್ 31ರವರೆಗೆ ಮಾತ್ರ ಅವಕಾಶ, ಎನ್ ಆರ್ ಐ ಗಳಿಗೆ ಮಾತ್ರ ಜೂನ್ 31ರವರೆಗೆ ಕಾಲಾವಕಾಶ ನೀಡಲಾಗಿದೆ ಅಂತಾ ಸರ್ಕಾರ ಸ್ಪಷ್ಟಪಡಿಸಿದೆ.  ವ್ಯಕ್ತಿ ಬೇರೆ ದೇಶದ ನಾಗರಿಕನಾಗಿದ್ದು, ಆತನ ಪೂರ್ವಜರು ಭಾರತೀಯರಾಗಿದ್ದರೆ ಅವರನ್ನು PIO ಎಂದು ಕರೆಯಲಾಗುತ್ತದೆ. ಭಾರತೀಯ ಪೌರತ್ವ ಹೊಂದಲು ಅರ್ಹನಾಗಿರುವ ವಿದೇಶೀ ಪ್ರಜೆಗೆ OCI ಎಂದು ಕರೆಯಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...