alex Certify
ಕನ್ನಡ ದುನಿಯಾ       Mobile App
       

Kannada Duniya

6000 ನ್ಯಾಯಾಧೀಶರ ನೇಮಕಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ:  ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದ ಪ್ರಕರಣಗಳ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿರುವುದಕ್ಕೆ ನ್ಯಾಯಾಧೀಶರ ಕೊರತೆ ಇರುವುದದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ರಾಷ್ಟ್ರ ವ್ಯಾಪಿ ಕೆಳಹಂತದ ನ್ಯಾಯಾಲಯಗಳಿಗೆ ಆರು ಸಾವಿರ ನ್ಯಾಯಾಧೀಶರನ್ನು ಶೀಘ್ರವೇ ನೇಮಿಸಲು ಮುಂದಾಗಿದೆ.

ಏಕ ಕಾಲದಲ್ಲಿ ಇಷ್ಟು ಸಂಖ್ಯೆಯಲ್ಲಿ ನೇಮಕ ಮಾಡಲು ತಯಾರಿ ನಡೆಸಿದ್ದು, ಕೇಂದ್ರ ಲೋಕಸೇವಾ ಆಯೋಗ ಅಥವಾ ಇನ್ಯಾವುದೇ ಕೇಂದ್ರ ಸಂಸ್ಥೆ ಮೂಲಕ ರಾಷ್ಟ್ರ ವ್ಯಾಪಿ ಪ್ರವೇಶ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ ಮತ್ತು ಜಿಲ್ಲಾ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಕಾರಣ ಸ್ಥಳೀಯ ಭಾಷೆಗೂ ಪರೀಕ್ಷೆಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಸಿಬಿಎಸ್ಇ ನಡೆಸುವ ನೀಟ್ ಮಾದರಿಯಲ್ಲೇ ಏಕ ಕಾಲದಲ್ಲಿ ಪರೀಕ್ಷೆ ನಡೆಸಬೇಕೆಂಬ ಉದ್ದೇಶ ಹೊಂದಲಾಗಿದೆ. ಬಳಿಕ ಅಖಿಲ ಭಾರತ ಮಟ್ಟದ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುತ್ತದೆ. ಬಳಿಕ ಆಯಾ ರಾಜ್ಯಕ್ಕೆ ಪ್ರತ್ಯೇಕ ಪಟ್ಟಿ ಮಾಡಿಕೊಂಡು ನೇಮಕ ಮಾಡುವ ಚಿಂತನೆ ಇದೆ.

ದೇಶಾದ್ಯಂತ ನ್ಯಾಯಾಧೀಶರನ್ನು ನೇಮಿಸಲು ಏಕರೂಪ ವ್ಯವಸ್ಥೆ ಮಾಡುವ ಕುರಿತು ಸುಪ್ರಿಂಕೋರ್ಟ್ನಲ್ಲಿ ಸೂಚನೆ ಬಂದ ಬಳಿಕ ಮುಂದುವರಿಯಲು ಕೇಂದ್ರ ನಿರ್ಧರಿಸಿದೆ. ಒಂದು ಮಾಹಿತಿ ಪ್ರಕಾರ ದೇಶದ ಕೆಳ ಹಂತದ ನ್ಯಾಯಾಲಯಗಳಲ್ಲಿ 2.78 ಕೋಟಿ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದೆ.

ರಾಜ್ಯಗಳಲ್ಲಿ ನೇಮಕ ಪ್ರಕ್ರಿಯೆ ನಡೆಸುವುದು ತಡವಾಗುವ ಕಾರಣ ದೊಡ್ಡ ಸಂಖ್ಯೆಯಲ್ಲಿ ಹುದ್ದೆ ಖಾಲಿ ಉಳಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...