alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬಂಕ್ ನಲ್ಲಿ ಸಿಗಲಿದೆ ಔಷಧಿ

petrol-pump-650_650x400_61456140362

ಕೇಂದ್ರ ಸರ್ಕಾರ ದೇಶದಾದ್ಯಂತ ಇರುವ ಸರ್ಕಾರಿ ಪೆಟ್ರೋಲ್ ಬಂಕ್ ಗಳ ಗಳಿಕೆ ಹೆಚ್ಚಿಸಲು ಕ್ರಮ ಕೈಗೊಂಡಿದೆ. ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್ ಗಳಲ್ಲಿ ಜೆನೆರಿಕ್ ಔಷಧಿ ಅಂಗಡಿ ತೆರೆಯುವ ಯೋಜನೆ ಮೇಲೆ ಕೆಲಸ ಮಾಡ್ತಿದೆ. ಕೇಂದ್ರ ಸರ್ಕಾರ ಇದಕ್ಕೆ ಜನ್ ಔಷಧಿ ಎಂದು ಹೆಸರಿಡಲು ನಿರ್ಧರಿಸಿದೆ.

ಬಡ ಜನರಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುವುದು ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶವಾಗಿದೆ. ಕೇಂದ್ರದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಬುಧುವಾರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಔಷಧಿ ಅಂಗಡಿ ಜೊತೆಗೆ ಮಾಹಿತಿ ತಂತ್ರಜ್ಞಾನ ಕೇಂದ್ರ ತೆರೆಯುವ ಬಗ್ಗೆ ಯೋಜನೆ ರೂಪಿಸಲಾಗ್ತಿದೆ ಎಂದು ಸಚಿವರು ಹೇಳಿದ್ದಾರೆ.

ಔಷಧಿ ಜೊತೆಗೆ ದಿನಸಿ ವಸ್ತು ಸೇರಿದಂತೆ ಇನ್ನೂ ಕೆಲ ವಸ್ತುಗಳನ್ನು ಮಾರಾಟ ಮಾಡಲು ಅನುಮತಿ ಕೋರಿದೆ. ಒಪ್ಪಂದದ ಪ್ರಕಾರ ತೈಲ ಮಾರಾಟ ಕಂಪನಿಗಳು ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ಎಲ್ ಇಡಿ ಬಲ್ಬ್, ಎಲ್ ಇಡಿ ಟ್ಯೂಬ್ ಗಳು ಹಾಗೂ Energy efficient wings ಮಾರಾಟ ಮಾಡಲಿದೆ. ಆರಂಭದಲ್ಲಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ  ಇದನ್ನು ತೆರೆಯಲು ಚಿಂತನೆ ನಡೆಸಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...