alex Certify
ಕನ್ನಡ ದುನಿಯಾ       Mobile App
       

Kannada Duniya

ಆಪ್ ಸರ್ಕಾರದ ಎಲ್ಲಾ ಸಭೆಗಳ ನೇರ ಪ್ರಸಾರ

ದೆಹಲಿಯ ಆಮ್ ಆದ್ಮಿ ಸರ್ಕಾರ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಲೇ ಇದೆ. ಇದರ ನೇರ ಪರಿಣಾಮ ಮುಂದಿನ ಚುನಾವಣೆ ಮೇಲೂ ಆಗಬಹುದು ಅನ್ನೋದು ಎಎಪಿ ಆತಂಕ. ಹಾಗಾಗಿ ಜನರು ಮತ್ತು ಅಧಿಕಾರಿಗಳ ಮನಗೆಲ್ಲಲು ಹೊಸ ಸರ್ಕಸ್ ಶುರು ಮಾಡಿದೆ.

ಎಲ್ಲಾ ಅಧಿಕೃತ ಸಭೆಗಳನ್ನು ನೇರ ಪ್ರಸಾರ ಮಾಡಲು ಸರ್ಕಾರ ಮುಂದಾಗಿದೆ. ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳ ಸಭೆಯಿಂದ ಹಿಡಿದು ಪ್ರತಿಯೊಂದು ಮೀಟಿಂಗ್ ಅನ್ನೂ ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಆಡಳಿತದಲ್ಲಿ ಅಧಿಕಾರಿಗಳಿಗೆ ಎಷ್ಟು ಮಹತ್ವವಿದೆ ಅನ್ನೋದನ್ನು ತಿಳಿಸೋದು ಇದರ ಉದ್ದೇಶ.

ನೇರ ಪ್ರಸಾರದಲ್ಲಿ ಧ್ವನಿಯನ್ನು ಕೂಡ ಆಲಿಸಬಹುದು. ಇದರಿಂದ ಜನಸಾಮಾನ್ಯರು ಕೂಡ ಸರ್ಕಾರ ಏನು ಮಾಡ್ತಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬಹುದು. ಯೋಜನೆಗಳು, ಅವುಗಳ ಅನುಷ್ಠಾನ ಯಾವ ರೀತಿ ಆಗ್ತಿದೆ ಅನ್ನೋದನ್ನು ತಿಳಿದುಕೊಳ್ಳಬಹುದು. ಆದ್ರೆ ತೀರಾ ಗುಪ್ತ ಸಭೆಯನ್ನು ನೇರಪ್ರಸಾರ ಮಾಡಲಾಗುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...