alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಗ್ಯ: ಜನತೆಗೆ ಶುಭ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ‘ಆಯುಷ್ಮಾನ್ ಭಾರತ್’ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆ ಜಾರಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

1347 ಚಿಕಿತ್ಸೆ ಸೇವೆಗಳು ಯೋಜನೆಯಡಿಯಲ್ಲಿ ದೊರೆಯಲಿವೆ. ಬಡವರು, ಹಿಂದುಳಿದ ಸಮುದಾಯದವರಿಗಾಗಿ ಈ ಯೋಜನೆಯಡಿ ವೈದ್ಯಕೀಯ ವಿಮೆ ಒದಗಿಸಲಾಗುವುದು. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ಯೋಜನೆಗೆ ಅನುಮೋದನೆ ನೀಡಲಾಗಿದೆ.

ವರ್ಷಕ್ಕೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವಿಮೆ ಸೌಲಭ್ಯ ಸಿಗಲಿದೆ. 1347 ಚಿಕಿತ್ಸಾ ಸೇವೆಗಳು ಇದರಲ್ಲಿ ಸೇರಿದ್ದು, ಸುಮಾರು 10.74 ಕೋಟಿ ಫಲಾನುಭವಿಗಳಾಗಲಿದ್ದಾರೆ. ಕೇಂದ್ರ ಆರೋಗ್ಯ ಮಂತ್ರಾಲಯ ಮತ್ತು ವಿಮೆ ಕಂಪನಿಗಳೊಂದಿಗೆ ಒಪ್ಪಂದವಾದ ಬಳಿಕ ಫಲಾನುಭವಿಗಳು ಪಾವತಿಸುವ ವಿಮಾ ಕಂತು ಕುರಿತಾಗಿ ತೀರ್ಮಾನ ಕೈಗೊಳ್ಳಲಾಗುವುದು.

ಇನ್ನು ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದ್ದು, ಸಮಗ್ರವಾದ ಚಿಕಿತ್ಸೆಗೆ ಏಕರೂಪದ ದರ ಪಟ್ಟಿಯನ್ನು ಆರೋಗ್ಯ ಮಂತ್ರಾಲಯ ನಿಗದಿ ಮಾಡಲು ಕ್ರಮಕೈಗೊಂಡಿದೆ. ಈ ಯೋಜನೆಯ ಸಮಗ್ರ ಚಿಕಿತ್ಸಾ ವೆಚ್ಚದಲ್ಲಿ ಆಸ್ಪತ್ರೆಯ ದಾಖಲಾತಿ, ತಪಾಸಣೆ, ಶಸ್ತ್ರಚಿಕಿತ್ಸೆ, ಔಷಧ ವೆಚ್ಚಗಳು ಕೂಡ ಸೇರಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...