alex Certify
ಕನ್ನಡ ದುನಿಯಾ       Mobile App
       

Kannada Duniya

2 ವರ್ಷಗಳ ಕಾಲ ಲಭ್ಯವಿಲ್ಲ ಸ್ಮಿರ್ನಾಫ್ ವೋಡ್ಕಾ

ದೆಹಲಿಯ ಲಿಕ್ಕರ್ ಶಾಪ್ ಗಳಲ್ಲಿ ಇನ್ನು ಕೆಲಕಾಲ ವ್ಯಾಟ್ 69 ವಿಸ್ಕಿ ಮತ್ತು ಸ್ಮಿನಾರ್ಫ್ ವೋಡ್ಕಾ ಸಿಗಲ್ಲ.

ದೆಹಲಿ ಹಣಕಾಸು ಆಯುಕ್ತರು ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಅನ್ನು ಕಪ್ಪುಪಟ್ಟಿಗೆ ಸೇರಿಸಿರುವ ಕಾರಣ, ಇನ್ನೆರಡು ವರ್ಷ ಈ ಎರಡು ಬ್ರಾಂಡ್ ಐಟಂಗಳು ರಾಷ್ಟ್ರ ರಾಜಧಾನಿಯಲ್ಲಿ ಸಿಗಲ್ಲ.

ತನ್ನ ಉತ್ಪನ್ನಗಳ ಮೇಲೆ ನಕಲಿ ಬಾರ್ ಕೋಡ್ ಬಳಸಲಾಗುತ್ತಿದ್ದುದು ಪತ್ತೆಯಾಗಿದ್ದು, ದೆಹಲಿ ಎಕ್ಸೈಸ್ ಆಕ್ಟ್ ಮತ್ತು ಎಕ್ಸೈಸ್ ರೂಲ್ಸ್ ಪ್ರಕಾರ ನಕಲಿ ಬಾರ್ ಕೋಡ್ ಬಳಸುವುದು ಅಪರಾಧ. ಈ ಕಾರಣಕ್ಕೆ ಮಾರಾಟ ನಿಷೇಧ ಮಾಡಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹಣಕಾಸು ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈ ಕಾರಣದಿಂದ ದೆಹಲಿಯ ಮದ್ಯ ಮಾರಾಟ ಮಳಿಗೆಗಳಲ್ಲಿ ವ್ಯಾಟ್ 69 ವಿಸ್ಕಿ ಮತ್ತು ಸ್ಮಿನಾರ್ಫ್ ವೋಡ್ಕಾ ಲಭ್ಯವಿಲ್ಲವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...