alex Certify
ಕನ್ನಡ ದುನಿಯಾ       Mobile App
       

Kannada Duniya

ಡೆಡ್ಲಿ ಬ್ಲೂವೇಲ್ ಗೇಮ್ ಗೆ ಬೀಳುತ್ತೆ ಬ್ರೇಕ್

game

ಅಪಾಯಕಾರಿ ಆನ್ ಲೈನ್ ಗೇಮ್ ‘ಬ್ಲೂ ವೇಲ್ ಚಾಲೆಂಜ್’ ಅನ್ನು ಕೂಡಲೇ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಗೂಗಲ್, ಫೇಸ್ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಮ್ , ಯಾಹೂ ಮತ್ತು ಮೈಕ್ರೋಸಾಫ್ಟ್ ಗೆ ಸೂಚನೆ ನೀಡಿದೆ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಈ ಗೇಮ್ ಮಕ್ಕಳ ಸಾವಿಗೆ ಕಾರಣವಾಗುತ್ತಿದೆ.

ಈ ಲಿಂಕ್ ಅಥವಾ ಇನ್ಯಾವುದೇ ಹೆಸರಲ್ಲಿ ಬ್ಲೂ ವೇಲ್ ಚಾಲೆಂಜ್ ಸಿಗದಂತೆ ತೆಗೆದು ಹಾಕಿ ಅಂತಾ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಆಗಸ್ಟ್ 11ರಂದು ಇಂಟರ್ನೆಟ್ ದೈತ್ಯ ಕಂಪನಿಗಳಿಗೆ ಸೂಚನೆ ಕಳುಹಿಸಿದೆ. ಸಚಿವ ರವಿಶಂಕರ್ ಪ್ರಸಾದ್ ಅವರ ಸೂಚನೆ ಮೇರೆಗೆ ಕಳುಹಿಸಲಾಗಿದೆ.

ಬ್ಲೂ ವೇಲ್ ಚಾಲೆಂಜ್ ಅನ್ನೋದು ಒಂದು ಸೂಸೈಡ್ ಗೇಮ್. 50 ದಿನಗಳ ಅವಧಿಯಲ್ಲಿ ಅಪಾಯಕಾರಿ ಟಾಸ್ಕ್ ಗಳನ್ನು ನೀಡಲಾಗುತ್ತದೆ. ಕೊನೆಯಲ್ಲಿ ಆತ್ಮಹತ್ಯೆಯ ಚಾಲೆಂಜ್ ಇರುತ್ತದೆ. ಮುಂಬೈನಲ್ಲಿ ಈ ಗೇಮ್ ಹುಚ್ಚಿಗೆ ಬಿದ್ದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಇಂತಹ ಇನ್ನೂ ಹಲವು ಪ್ರಕರಣಗಳು ವರದಿಯಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...